Advertisement

Multan Test: ಇಂಗ್ಲೆಂಡ್‌ಗೆ ಡಕೆಟ್‌ ಶತಕದ ಆಸರೆ

10:13 PM Oct 16, 2024 | Team Udayavani |

ಮುಲ್ತಾನ್‌: ಆರಂಭಕಾರ ಬೆನ್‌ ಡಕೆಟ್‌ ಅವರ ಶತಕದ ನೆರವಿನಿಂದ ಪಾಕಿಸ್ಥಾನ ಎದುರಿನ ಮುಲ್ತಾನ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 6 ವಿಕೆಟಿಗೆ 239 ರನ್‌ ಗಳಿಸಿದೆ.

Advertisement

ಬೆನ್‌ ಡಕೆಟ್‌ ಕೊಡುಗೆ 114 ರನ್‌ (129 ಎಸೆತ, 16 ಬೌಂಡರಿ). ಅವರದು ಏಕಾಂಗಿ ಹೋರಾಟವಾಗಿತ್ತು. 34 ರನ್‌ ಮಾಡಿದ ಜೋ ರೂಟ್‌ ಅವರದು ಅನಂತರದ ಹೆಚ್ಚಿನ ಗಳಿಕೆ. ಮೊದಲ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದ ಹ್ಯಾರಿ ಬ್ರೂಕ್‌ ಇಲ್ಲಿ 9 ರನ್ನಿಗೆ ಔಟಾದರು. ಇಂಗ್ಲೆಂಡ್‌ ಇನ್ನೂ 127 ರನ್‌ ಹಿನ್ನಡೆಯಲ್ಲಿದೆ. ಪಾಕ್‌ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ ಗಳಿಸಿದೆ. ಪಾಕಿಸ್ಥಾನದ ಆಫ್ಸ್ಪಿನ್ನರ್‌ ಸಾಜಿದ್‌ ಖಾನ್‌ 86 ರನ್ನಿಗೆ 4 ವಿಕೆಟ್‌ ಉರುಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next