Advertisement
ಮೂಳೂರು – ಬೆಳಪು ರಸ್ತೆ ಬದಿಯಲ್ಲಿರುವ ಮನೆಯಲ್ಲಿ ವಾಸವಿದ್ದ ಲಲಿತಾ ರಾಜನ್ (65) ಮೃತ ಮಹಿಳೆ.ಲಲಿತಾ ಅವರು ತನ್ನ ತಮ್ಮನ ಹೆಂಡತಿಯೊಂದಿಗೆ ವಾಸವಿದ್ದರು. ಮನೆಯವರು ಮೇ 17ರಂದು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಮೂರ್‍ನಾಲ್ಕು ದಿನಗಳ ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದ್ದು, ಮೃತ ದೇಹ ಕೊಳೆತು ಹೋದ ಸ್ಥಿತಿಯಲ್ಲಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಾಪು ಎಸ್‌ಐ ನಿತ್ಯಾನಂದ ಗೌಡ ಅವರು ಕಾಪುವಿನ ಸೂರಿ ಶೆಟ್ಟಿ ಮತ್ತು ನಾಗರಾಜ್ ಶವವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಮೃತರ ಸಂಬಂಧಿ ಜಯಮ್ಮ ನೀಡಿದ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.