Advertisement

ಮುಳ್ಳೂರು ಶಾಲೆ: ಜೈವಿಕ ಅನಿಲ ಉತ್ಪಾದನಾ ಘಟಕ ಸ್ಥಾಪನೆ

01:00 AM Feb 24, 2019 | Team Udayavani |

ಶನಿವಾರಸಂತೆ: ಸ್ವನು ಭವದ ಕಲಿಕೆ, ಕ್ರಿಯಾಶೀಲತೆಯ ಚಟುವಟಿಕೆಗಳಿಗೆ ಹೆಸರುವಾಸಿಯಾದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾಳಜಿಯ ಮತ್ತೂಂದು ಕಾರ್ಯ ಸೇರ್ಪಡೆಯಾಗಿದೆ. ಅದುವೇ ಜೈವಿಕ ಅನಿಲ ಉತ್ಪಾಧನಾ ಘಟಕದ ಸ್ಥಾಪನೆ. ಈ ಹಿಂದೆ ಸೋಲಾರ್‌ ಪಾರ್ಕ್‌ ಅನ್ನು ಸ್ಥಾಪಿಸಿ ಶಾಲಾ ಕಂಪ್ಯೂಟರ್‌ ಮತ್ತು ದೀಪಗಳು ಬೆಳಗುವಂತೆ ಮಾಡಿ ಸೌರಶಕ್ತಿಯ ಬಳಕೆಯ ಕುರಿತು ಜಾಗೃತಿ ಮೂಡಿಸದ್ದರು.

Advertisement

ಇದೀಗ ಶಾಲಾ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾಧಿಸಿ ಇಂಧನ ಉಳಿತಾಯದ ಅರಿವು ಮೂಡಿಸಲಾಗಿದೆ. ಐದನೆ ತರಗತಿಯ ಪರಿಸರ ಅದ್ಯಯನ ಪಠ್ಯದಲ್ಲಿ ಜೈವಿಕ ಅನಿಲ ಉತ್ಪಾನೆಯ ಕುರಿತಾಗಿ ತರಕಾರಿ ಸಿಪ್ಪೆ, ಆಹಾರ ತ್ಯಾಜ್ಯ, ಸಸ್ಯದ ಅವಶೇ‚, ಪ್ರಾಣಿಗಳ ಸಗಣಿ ಇತ್ಯಾದಿಗಳನ್ನು ಸದ್ಬಳಕೆ ಮಾಡಿಕೊಂಡು ಗಾಳಿಯ ಸಂಪರ್ಕ ಇಲ್ಲದೆ ಕೊಳೆಯಿಸಿದಾಗ ಜೈವಿಕ ಅನಿಲ ಉತ್ಪಾಧನೆಯಾಗುತ್ತದೆ ಎಂಬ ಮಾಹಿತಿಯನ್ನು ಸವಿಸ್ತಾರವಾಗಿ ತಳಿಸಿರುವ ಹಿನ್ನಲೆಯಲ್ಲಿ ಇದನ್ನು ಕಾರ್ಯರೂಪದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದ ಶಾಲಾ ಸಹ ಶಿಕ್ಷಕ ಸಿ.ಎಸ್‌.ನೇತೃತ್ವದಲ್ಲಿ ಶಿಕ್ಷಕರ ತಂಡ ಜೈವಿಕ ಅನಿಲ ಉತ್ಪಾಧನಾ ಘಟಕವನ್ನು ಸ್ಥಾಪಿಸಿದ್ದಾರೆ. 

ಶಾಲಾ ಆವರಣದಲ್ಲಿ ನಿರುಪಯುಕ್ತವಾಗಿ ದುಸ್ಥಿತಿಯಲ್ಲಿದ್ದ ಮಳೆ ಕೊಯ್ಲು ಟ್ಯಾಂಕ್‌ ಅನ್ನು ಅತಿ ಕಡಿಮೆ ವೆಚ್ಚದಲ್ಲಿ ದುರಸ್ಥಿಗೊಳಿಸಿ ಸ್ವಂತ ಶಿಕ್ಷಕರು ವಿದ್ಯಾರ್ಥಿಗಳ ಪರಿಶ್ರಮದಿಂದ ಮಳೆಕೊಯ್ಲು ಘಟಕವನ್ನು ಜೈವಿಕ ಅನಿಲ ಉತ್ಪಾದನಾ ಘಟಕವನ್ನಾಗಿ ಪರಿವರ್ತನೆ ಮಾಡಲಾಯಿತು. ಹಳೆಯ ಬ್ಯಾರಲ್‌ಡ್ರಮ್‌ ಭಾಗವನ್ನು ಬಳಿಸಿಕೊಂಡು ತರಕಾರಿ ತ್ಯಾಜ್ಯ, ಉಳಿಕೆ ಆಹಾರ ಪದಾರ್ಥಗಳನ್ನು ಹಾಕುವ ಪೂರ್ವ ಸಂಗ್ರಹಣಾ ತೊಟ್ಟಿಯನ್ನು ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next