Advertisement

ಮುಲ್ಲಾಮಾರಿ ನೀರು ಸೇಡಂಗ

06:38 AM Feb 15, 2019 | |

ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಹರಿ ಬಿಡಲಾಗಿದ್ದ ನೀರು ಸೇಡಂ ಪಟ್ಟಣಕ್ಕೆ ಇನ್ನೆರಡು ದಿನಗಳಲ್ಲಿ ತಲುಪಲಿವೆ ಎಂದು ಯೋಜನೆ ಎಇಇ ವಿಕಾಸರಾವ್‌ ಕುಲಕರ್ಣಿ ತಿಳಿಸಿದ್ದಾರೆ.

Advertisement

ಚಿಂಚೋಳಿ ಮತ್ತು ಸೇಡಂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದ ಹಿನ್ನಲೆಯಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಾಗರಾಳ ಗ್ರಾಮದ ಬಳಿ ಇರುವ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಫೆ.7ರಂದು ಒಂದು ಗೇಟು ಮೇಲೆತ್ತಿ ಪ್ರತಿನಿತ್ಯ 275 ಕ್ಯೂಸೆಕ್‌ ನೀರು ಬಿಡಲಾಗಿದೆ.

ಹೀಗಾಗಿ ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ, ಸೇಡಂ ತಾಲೂಕಿನ ಲಾವಾಡಿ ಬ್ಯಾರೇಜ್‌ಗಳಲ್ಲಿ ಹೆಚ್ಚು ನೀರಿನ ಸಂಗ್ರಹವಾಗಿದೆ. ಇದರಿಂದ ಬೇಸಿಗೆ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಉಪಯೋಗ ಆಗಲಿದೆ. ಅಲ್ಲದೆ ಬಾವಿ, ಕೊಳವೆಬಾವಿಗಳಲ್ಲಿ ಅಂರ್ತಜಲ ಹೆಚ್ಚಳ ಅಗಲಿದೆ ಎಂದು ತಿಳಿಸಿದ್ದಾರೆ.  ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚು ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿಯೂ ನೀರು ಹರಿ ಬಿಡಬಹುದಾಗಿದೆ. 

ಮುಲ್ಲಾಮಾರಿ ನದಿಗೆ ನೀರು ಹರಿದು ಬಿಟ್ಟಿದ್ದರಿಂದ ಬತ್ತಿದ್ದ ಪಂಚಲಿಂಗೇಶ್ವರ ಬುಗ್ಗಿಯಲ್ಲಿ ನೀರು ಹರಿಯುತ್ತಿದೆ. ನದಿ ದಂಡೆಯಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next