Advertisement

ಮೂಲ್ಕಿ : ಕುಡಿಯುವ ನೀರಿನ ಘಟಕ ದುರಸ್ತಿ 

10:54 AM Oct 31, 2017 | Team Udayavani |

ಹಳೆಯಂಗಡಿ: ಮೂಲ್ಕಿಯ ಲಯನ್ಸ್‌ ಕ್ಲಬ್‌ನ ಸಂಯೋಜನೆಯಲ್ಲಿ ಕುದುರೆಮುಖ ಸಂಸ್ಥೆಯ ಸಹಕಾರದಲ್ಲಿ ಸುಮಾರು 3 ಲಕ್ಷ ರೂ, ವೆಚ್ಚದಲ್ಲಿ ಮೂಲ್ಕಿ ಬಸ್‌ ನಿಲ್ದಾಣದ ಬಳಿ ನಿರ್ಮಿಸಿದ್ದ ಶೀತಲೀಕೃತ ಕುಡಿಯುವ ನೀರಿನ ಘಟಕವು ಕಾರ್ಯಾರಂಭಗೊಂಡಿದೆ.

Advertisement

ವರ್ಷದ ಹಿಂದೆಯೇ ಕೆಟ್ಟು ಹೋಗಿದ್ದ ಈ ನೀರಿನ ಘಟಕದ ಬಗ್ಗೆ ಎಪ್ರಿಲ್‌ 29ರಂದು ಉದಯವಾಣಿಯ ಸುದಿನವೂ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಬಸ್‌ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಘಟಕವನ್ನು ಪಂಚಾಯತ್‌ನಿಂದಲೇ ದುರಸ್ತಿ ಮಾಡಲಾಗಿದೆ. ನಲ್ಲಿಯಲ್ಲಿ ನೀರು ಸಿಗದಿದ್ದರೆ ಟ್ಯಾಂಕರ್‌ ಮೂಲಕವಾದರೂ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next