Advertisement

ಮೂಲ್ಕಿ: ಪ್ರಗತಿ ಪರಿಶೀಲನ ಸಭೆ 

11:15 AM Jan 06, 2018 | Team Udayavani |

ಮೂಲ್ಕಿ: ಸರಕಾರದ ಯೋಜನೆಗಳನ್ನು ಜನರಿಗೆ ಸರಿಯಾದ ಸಮಯದಲ್ಲಿ ತಲುಪಿಸುವುದು ಅಗತ್ಯ ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ ಅವರು ಹೇಳಿದರು. 

Advertisement

ಮೂಲ್ಕಿ ವಿಶೇಷ ತಶೀಲ್ದಾರರ ಕಚೇರಿಯಲ್ಲಿ ನಡೆದ ಮೂಲ್ಕಿಯ ಕಂದಾಯ ಮತ್ತು ಸರಕಾರದ ಇತರ ಇಲಾಖೆಗಳ ಹಾಗೂ ಸ್ಥಳೀಯಾಡಳಿತ ಅಧಿಕಾರಿಗಳ ಜತೆಗಿನ ಸರಕಾರದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಜನರ ಮೂಲಸೌಕರ್ಯ ಮತ್ತು ಬೇಡಿಕೆ ಪೂರೈಸುವಲ್ಲಿ ಒದಗಿಸಲಾಗಿರುವ ಸರಕಾರದ ಯೋಜನೆಗಳನ್ನು ಜನರಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಕಾಲದಲ್ಲಿ ಒದಗಿಸಬೇಕು ಎಂದರು.

ಐಕಳ ನಿವೇಶನ
ಪಂಚಾಯತ್‌ಗೆ ವರ್ಗಾವಣೆ

ಮೂಲ್ಕಿ ವಿಶೇಷ ತಹಶೀಲ್ದಾರ್‌ ಮಾಣಿಕ್ಯ ಮಾತನಾಡಿ, ಐಕಳ ಪಂ. ವ್ಯಾಪ್ತಿಯಲ್ಲಿ ಸರಕಾರದ ಅಧೀನದಲ್ಲಿದ್ದ ಸುಮಾರು ಐದು ಎಕ್ರೆಗಳಿಗೂ ಮಿಕ್ಕಿದ ಜಮೀನನನ್ನು ಪಂ.ಗೆ ವರ್ಗಾಯಿಸಿ ಆದೇಶ ಮಾಡಲಾ ಗಿದೆ. ಸುಮಾರು 1 ಎಕ್ರೆಯಷ್ಟು ಜಾಗ ವನ್ನು ಪ.ಜಾ. ಮತ್ತು ಪಂಗಡ, ಉಳಿದ 4 ಎಕ್ರೆ ಜಮೀನನ್ನು ಇತರ ಜಾತಿಯವರಿಗೆ ಮನೆ ನಿವೇಶನಕ್ಕೆ ಒದಗಿಸುವ ಉದ್ದೇಶಕ್ಕಾಗಿ ಬಳಸಲು ತೀರ್ಮಾನಿಸಲಾಗಿದೆ ಎಂದರು. ಜಮೀನಿನ ದಾಖಲೆಯನ್ನು ವರ್ಗಾಯಿಸಿದ ಆದೇಶವನ್ನು ಐಕಳ ಪಿಡಿಒ ಅವರಿಗೆ ಶಾಸಕರು ಹಸ್ತಾಂತರಿಸಿದರು.

ಆದೇಶ ಪತ್ರ ವಿತರಣೆ
ಮೂಡಬಿದಿರೆಯಲ್ಲಿ ಜ. 7ರಂದು ನಡೆಯುವ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸುಮಾರು 5,000 ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಅನ್ಯಾಯವಾಗದಿರಲಿ
ಸರಕಾರದ ಅತ್ಯಂತ ಮಹತ್ವದ 94ಸಿಸಿ ಯೋಜನೆ ಒಂದು ಉತ್ತಮ ಕಾರ್ಯಕ್ರಮ. ಇದರಿಂದ ಕಾನೂನುಬದ್ಧವಾಗಿ ಜನರಿಗೆ ಸಿಗಬೇಕಾದ ಅನ್ನ, ನೀರು, ಬೆಳಕು ಮತ್ತು ಶಿಕ್ಷಣವನ್ನು ಪಡೆಯಲು ಅವಕಾಶವಿದೆ. ಅಧಿಕಾರಿಗಳು ಈ ಯೋಜನೆಯ ಯಾವುದೇ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಂಡು ಕಾನೂನು ಬದ್ಧವಾಗಿ ಹಕ್ಕನ್ನು ಒದಗಿಸುವಲ್ಲಿ ಸಹಾಯ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕರು  ಮನವಿ ಮಾಡಿದರು.

Advertisement

ಸಬ್‌ ರಿಜಿಸ್ಟ್ರಾರ್‌ ಕಚೇರಿ: ಸಮಸ್ಯೆ ನೀಗಿಸಲು ಪ್ರಯತ್ನ
ಮೂಲ್ಕಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಸಮಸ್ಯೆಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಬ್‌ ರಿಜಿಸ್ಟ್ರಾರ್‌ ಗೋಪಾಲಕೃಷ್ಣ ಅವರಿಂದ ಮಾಹಿತಿ ಪಡೆದ ಶಾಸಕರು ಈ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಕುಡಿಯುವ ನೀರಿಗೆ ಯೋಜನೆ
ಮೂಡಬಿದಿರೆ ಕ್ಷೇತ್ರದ ಸುತ್ತಳತೆಯಲ್ಲಿ ಸುತ್ತಲೂ ಹರಡಕೊಂಡಿರುವ ನದಿಗಳನ್ನು ಸೂಕ್ತ ರೀತಿಯಲ್ಲಿ ಮಾಹಿತಿ ಪಡೆದುಕೊಂಡು ತಾಂತ್ರಿಕ ವರದಿ ತಯಾರಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ. ವ್ಯವಸ್ಥಿತವಾಗಿ ತಡೆಗೋಡೆ, ಅಣೆಕಟ್ಟು, ವೆಂಟೆಡ್‌ ಡ್ಯಾಮ್‌ ರಚಿಸಿ ಸಮಗ್ರವಾಗಿ ಕುಡಿಯುವ ನೀರಿನ ಯೋಜನೆಯನ್ನು ರೂಪುಗೊಳಿಸುವುದಾಗಿ ಶಾಸಕರು ಹೇಳಿದರು.

1.5 ಕೋ.ರೂ. ಯೋಜನೆ
ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಮಾರ್ಚ್‌ನಲ್ಲಿ ನಡೆಯುವ ಬ್ರಹ್ಮಕಲ ಶೋತ್ಸವಕ್ಕೆ ಪೂರಕವಾಗಿ ಸರಕಾರ ರೂ. 50 ಲಕ್ಷದ ಯಾತ್ರಿ ನಿವಾಸ, ದೇಗುಲದ ಎದುರಿನ ಪ್ರಾಂಗಣಕ್ಕೆ ರೂ. 50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್‌, ಯಾತ್ರಿ ನಿವಾಸದಲ್ಲಿ ಮತ್ತೆ ಹೆಚ್ಚುವರಿ ಕೋಣೆಗಳ ಪ್ರಗತಿಯನ್ನು ಹೊಂದುವಲ್ಲಿ ರೂ. 50 ಲಕ್ಷ ಹೆಚ್ಚುವರಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಕೆ. ಅಭಯಚಂದ್ರ ಜೈನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next