Advertisement

ಮೂಲ್ಕಿ ಸುಂದರರಾಮ್‌ ಶೆಟ್ಟಿ ನಾಮಕರಣ: ಮೇಯರ್‌ಗೆ ಮನವಿ

03:45 AM Jul 07, 2017 | Team Udayavani |

ಲಾಲ್‌ಬಾಗ್‌ : ಮಂಗಳೂರಿನ ಕೆಥೋಲಿಕ್‌ ಕ್ಲಬ್‌ನಿಂದ ಲೈಟ್‌ಹೌಸ್‌ ಹಿಲ್‌ ಆಗಿ ಅಂಬೇಡ್ಕರ್‌ ವೃತ್ತಕ್ಕೆ ಬರುವ ರಸ್ತೆಗೆ ದಿ| ಮೂಲ್ಕಿ ಸುಂದರರಾಮ್‌ ಶೆಟ್ಟಿ ಅವರ ಹೆಸರನ್ನಿಡು ವ ಮೂಲಕ ಎಲ್ಲ ಗೊಂದಲಗಳನ್ನು ನಿವಾರಿಸಬೇಕು ಹಾಗೂ ಸುಂದರರಾಮ್‌ ಶೆಟ್ಟಿ ಅವರಿಗೆ ಅಗೌರವವಾಗದಂತೆ ನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಸರಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ  ಮೇಯರ್‌ ಕವಿತಾ ಸನಿಲ್‌ ಅವರಿಗೆ ಮೂಲ್ಕಿ ನಾಗರಿಕರು ಮನವಿ ಸಲ್ಲಿಸಿದರು.  

Advertisement

ಸುಂದರರಾಮ್‌ ಶೆಟ್ಟಿ ಅವರು  ದೇಶ ಕಂಡ ಅತ್ಯಂತ ಅಪರೂಪದ ಶ್ರೇಷ್ಠ ಸಾಧಕ. ಸಾವಿರಾರು ಮಂದಿಗೆ ಉದ್ಯೋಗ ನೀಡಿದ  ಧೀಮಂತ ನಾಯಕ. ಜಾತಿ, ಮತ, ಧರ್ಮ, ವರ್ಗ, ಪಂಗಡದ ವ್ಯತ್ಯಾಸ ಮಾಡದೆ ಸಮಾಜ ಸೇವೆ ಮಾಡಿ ದಿವಂಗತರಾಗಿರುವ ಮೂಲ್ಕಿ ಸುಂದರರಾಮ್‌ ಶೆಟ್ಟಿ  ಅವರ ಹೆಸರಿಗೆ  ಅಗೌರವ ತೋರುವ, ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುವ ಘಟನಾವಳಿಗಳನ್ನು ಅವರ ತವರೂರಿನ ಜನತೆ ಸಹಿಸುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.

ನಿಯೋಗದಲ್ಲಿ ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್‌, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಸಂದೇಶ್‌ ಶೆಟ್ಟಿ, ಮುಖಂಡರಾದ ಮುರಳೀಧರ ಭಂಡಾರಿ, ಎನ್‌.ಎಸ್‌.ಸುಕುಮಾರ್‌ ಶೆಟ್ಟಿ, ಬಿ.ಪ್ರಭಾಕರ ಶೆಟ್ಟಿ, ನಾಗೇಶ್‌ ಎ. ಬಪ್ಪನಾಡು, ಎಂ.ಅಬ್ದುಲ್‌ ರಜಾಕ್‌, ಉದಯ ಶೆಟ್ಟಿ, ಎಚ್‌.ಮನ್ಸೂರ್‌ ಮೂಲ್ಕಿ, ಕೊಳ್ನಾಡ್‌ ಗುತ್ತು ರಾಮಚಂದ್ರ, ದೇವಪ್ರಸಾದ್‌ ಪುನರೂರು, ಸತೀಶ್‌ ಅಂಚನ್‌ ಮೂಲ್ಕಿ ಮುಂತಾದವರು ಉಪಸ್ಥಿತರಿದ್ದರು. 

ಮನವಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರಿಗೂ ನೀಡಲಾಗುವುದು ಎಂದು ನಿಯೋಗ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next