Advertisement

Mulki ಸೀಮೆ ಅರಸು ಕಂಬಳಕ್ಕೆ ಚಾಲನೆ; ಅರಸು ಪ್ರಶಸ್ತಿ ಪ್ರದಾನ

11:50 PM Dec 24, 2023 | Team Udayavani |

ಹಳೆಯಂಗಡಿ: ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಸಮಿತಿಯ ಅಧ್ಯಕ್ಷ ಕೊಲಾ°ಡುಗುತ್ತು ಕಿರಣ್‌ಕುಮಾರ್‌ ಶೆಟ್ಟಿ ಅವರಿಗೆ ಅನುಮತಿ ನೀಡುವ ಮೂಲಕ ರವಿವಾರ ಕಂಬಳ ಅಧಿಕೃತವಾಗಿ ಆರಂಭಗೊಂಡಿತು.

Advertisement

ಈ ವೇಳೆ ವಿವಿಧ ಧಾರ್ಮಿಕ ವಿಧಿ  ವಿಧಾನಗಳನ್ನು ನೆರವೇರಿಸಲಾಯಿತು. ಅರಮನೆಯ ಕೋಣಗಳನ್ನು ಮೆರವಣಿಗೆಯಲ್ಲಿ ಕಂಬಳದ ಗದ್ದೆಗೆ ಕರೆತರಲಾಯಿತು.

ಜೋಡುಕರೆಯಲ್ಲಿ ತೆಂಗಿನಕಾಯಿ, ಹಾಲು, ಅಭಿಷೇಕವನ್ನು ನಡೆಸಿ, ಹಿಂಗಾರದ ಅರ್ಪಣೆಯೊಂದಿಗೆ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಕೋಣಗಳು ಕಂಬಳದ ಕರೆಯಲ್ಲಿ ಓಡಿದ ಅನಂತರ ಕಂಬಳದ ಯಜಮಾನರಿಗೆ ಗೌರವ ಸಲ್ಲಿಸಲಾಯಿತು.

ಕಂಬಳ ಭಾರತೀಯ
ಸಂಸ್ಕೃತಿ: ಒಡೆಯರ್‌
ಕಂಬಳವನ್ನು ಉದ್ಘಾಟಿಸಿದ ಮೈಸೂರು ಅರಮನೆಯ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಕಂಬಳ ಕ್ರೀಡೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಈ ಮಣ್ಣಿನ ಗುಣವಿಶೇಷತೆಯನ್ನು ಹೊಂದಿದೆ. ನಮ್ಮ ಪೂರ್ವಜರು ಇಲ್ಲಿನ ಕಂಬಳದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.

ಬಪ್ಪನಾಡು ದೇಗುಲದ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮೈಸೂರಿನ ಶ್ರೀಸ್ವರೂಪ್‌ ಆನಂದ್‌, ಅರಮನೆಯ ಆಶಾಲತಾ, ಗೌತಮ್‌ ಜೈನ್‌, ಪವಿತ್ರೇಶ್‌ ಜೈನ್‌, ರಕ್ಷಾ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌, ಎಂ.ಎಚ್‌. ಅರವಿಂದ ಪೂಂಜಾ, ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ಎಚ್‌. ವಸಂತ ಬೆರ್ನಾಡ್‌, ಅಪು ಯಾನೆ ಶ್ರೀನಿವಾಸ ಪೂಜಾರಿ, ವಾಮನ ಇಡ್ಯಾ, ಸೂರ್ಯಕಾಂತ್‌ ಮುಂಬಯಿ, ಬಿ. ಸೂರ್ಯಕುಮಾರ್‌, ಚಂದ್ರಶೇಖರ್‌ ಜಿ., ಬಿಜೆಪಿಯ ಸುದರ್ಶನ್‌, ಶಶೀಂದ್ರ ಎಂ. ಸಾಲ್ಯಾನ್‌, ಸುಚೀಂದ್ರ ಅಮೀನ್‌ ಬರ್ಕೆ, ಯುವರಾಜ್‌ ಜೈನ್‌, ಆಸ್ಟಿನ್‌ ಸಂತೋಷ್‌, ಧರ್ಮದರ್ಶಿ ಮೋಹನ್‌ದಾಸ್‌, ವಿಜಯ ಶೆಟ್ಟಿ ಉಪಸ್ಥಿತರಿದ್ದರು.

Advertisement

ಅರಸು ಪ್ರಶಸ್ತಿ ಪ್ರದಾನ
ಮೂಲ್ಕಿ ಅರಮನೆ ವೆಲ್ಫೆರ್‌ ಮತ್ತು ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿಯು ಜಂಟಿಯಾಗಿ ಸಂಯೋಜಿಸಿರುವ ಅರಸು ಪ್ರಶಸ್ತಿಯನ್ನು ದಿ| ಪಯ್ಯೋಟ್ಟು ಸದಾಶಿವ ಸಾಲ್ಯಾನ್‌ (ಮರಣೋತ್ತರ), ಭುಜಂಗ ಎಂ. ಶೆಟ್ಟಿ ಉತೃಂಜೆ (ಸಾಮಾಜಿಕ), ನವೀನ್‌ ಶೆಟ್ಟಿ ಎಡೆ¾ಮಾರ್‌ (ತುಳು ಸಂಸ್ಕೃತಿ), ಗಂಗಾಧರ್‌ ದೇವಾಡಿಗ (ಕೃಷಿ), ಸುಷ್ಮಾ ತಾರಾನಾಥ್‌ ಅಮೀನ್‌ (ಕ್ರೀಡೆ), ಡಾ| ಗುರುಪ್ರಸಾದ್‌ ನಾವಡ (ವೈದ್ಯಕೀಯ), ದಿ| ಪಂಜದಗುತ್ತು ಶಾಂತಾರಾಮ ಶೆಟ್ಟಿ (ಅರಸು ಸೀಮೆಯ ಸಿರಿ) ಅವರಿಗೆ ದುಗ್ಗಣ್ಣ ಸಾವಂತರು ನೀಡಿ ಸಮ್ಮಾನಿಸಿದರು.

ಮೂಡುಬಿದಿರೆಯ ವಿವೇಕ್‌ ಆಳ್ವ, ದಿವಾಕರ ಕದ್ರಿ, ವೀಣಾ ಸಾಮಾನಿ, ಎಂ. ಶಶೀಂದ್ರಕುಮಾರ್‌ ಪಾವಂಜೆ, ಸೊಸೈಟಿಯ ಪ್ರತಿಭಾ ಕುಳಾಯಿ, ಉಮಾನಾಥ ಶೆಟ್ಟಿಗಾರ್‌, ತನುಜಾ ಶೆಟ್ಟಿ, ವಿಜಯಕುಮಾರ್‌ ಸನಿಲ್‌, ಗಣೇಶ್‌ ದೇವಾಡಿಗ, ಸಿಇಒ ಸುದರ್ಶನ್‌ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಎಚ್‌. ವಸಂತ ಬೆರ್ನಾಡ್‌ ಸ್ವಾಗತಿಸಿದರು, ಟ್ರಸ್ಟ್‌ನ ಗೌತಮ್‌ ಜೈನ್‌ ವಂದಿಸಿದರು, ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next