Advertisement

Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್‌; ಸುಗಮ ಸಂಚಾರಕ್ಕೆ ಅಡ್ಡಿ

03:07 PM Dec 29, 2024 | Team Udayavani |

ಮೂಲ್ಕಿ: ಹಳೆಯಂಗಡಿಯ ಒಳಪೇಟೆಗೆ ಹೆದ್ದಾರಿಯಿಂದ ಹೋಗಲು ಮತ್ತು ಬರಲು ಇರುವ ಅಡ್ಡರಸ್ತೆಯ ಬದಿಯಲ್ಲಿ ಅಡ್ಡವಾಗಿ ಸರತಿ ಸಾಲಿನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಗಮನಿಸಿದ ಗ್ರಾಮ ಪಂಚಾಯತ್‌ ನಿಲುಗಡೆಯನ್ನು ನಿಷೇಧಿಸಿ ಬೋರ್ಡ್‌ ಅಳವಡಿಸಿದೆಯಾರೂ ಜನ ಕ್ಯಾರೆ ಎನ್ನದೆ ತಮ್ಮ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡುತ್ತಿದ್ದು, ಸಂಚಾರ ಸಮಸ್ಯೆ ಮುಂದುವರಿದಿದೆ ಎಂದು ನಿತ್ಯಸಂಚಾರಿಗಳು ದೂರಿದ್ದಾರೆ.

Advertisement

ಇದು ಒಳ ರಸ್ತೆ ಆಗಿರುವ ಕಾರಣ ಅಗಲಕಿರಿದಾಗಿದ್ದು, ಬದಿ ಯಲ್ಲಿ ವಾಹನ ಪಾರ್ಕ್‌ ಮಾಡಿದರೆ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗುತ್ತದೆ. ಅಲ್ಲದೆ ಪಾದಚಾರಿಗಳು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಇಲ್ಲಿ ವಾಹನ ಪಾರ್ಕ್‌ ಮಾಡಿದವರ ಮೇಲೆ ಕೇಸು ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಗ್ರಾಮ ಪಂಚಾಯತ್‌ ಬೋರ್ಡ್‌ ಹಾಕಿದೆ. ಆದರೆ ದಂಡ ಪಡೆಯುವವರು ಹಾಗೂ ವಾಹನ ನಿಲುಗಡೆ ಮಾಡದಂತೆ ಸೂಚಿಸಲು ಸಂಬಂಧಪಟ್ಟವರು ಯಾರೂ ಸ್ಥಳದಲ್ಲಿಲ್ಲ. ಹಾಗಾಗಿ ಜನರು ಯಾವುದೇ ಭಯವಿಲ್ಲದೆ ದಿನದ 8ರಿಂದ 10 ಗಂಟೆಗಳ ಕಾಲ ತಮ್ಮ ವಾಹನವನ್ನು ಇಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

ಪಕ್ಷಿಕೆರೆ ಕಿನ್ನಿಗೋಳಿ ರಸ್ತೆಯಿಂದ ಅಡ್ಡವಾಗಿ ಮತ್ತು ಹೆದ್ದಾರಿಯಿಂದ ಒಳ ಪೇಟೆಯತ್ತಾ ಹೋಗುವಲ್ಲಿ ಸುಮಾರು ಅರ್ಧ ಫರ್ಲಾಂಗು ಉದ್ದಕ್ಕಿರುವ ಈ ಅಡ್ಡ ರಸ್ತೆಯಲ್ಲಿ ಬೇರೆ ಬೇರೆ ಕೆಲಸ ನಿಮಿತ್ತ ವಿವಿಧೆಡೆಗಳಿಗೆ ಹೋಗುವ ಜನ ತಮ್ಮ ದ್ವಿಚಕ್ರ ವಾಹನವನ್ನು ಇಲ್ಲಿರಿಸಿ ಹೋಗುವ ಕಾರಣದಿಂದ ಈ ರಸ್ತೆಯಲ್ಲಿ ಎದುರು ಬದುರು ವಾಹನ ಬಂದಾಗ ಸಂಚಾರ ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯಿಂದ ಕಾನೂನು ಕ್ರಮ ಜರಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next