Advertisement
ಈ ವ್ಯಾಪ್ತಿಯ ಮಾನಂಪಾಡಿ, ಬಪ್ಪನಾಡು, ಕಾರ್ನಾಡು ಮತ್ತು ಚಿತ್ರಾಪು ಗ್ರಾಮಗಳ ಪೈಕಿ ಮಾನಂಪಾಡಿ, ಚಿತ್ರಾಪು, ಬಪ್ಪನಾಡು ಗ್ರಾಮದಲ್ಲಿ ಚಂದ್ರ ಶ್ಯಾನು ಭಾಗರ ಕುದ್ರು, ಕೊಳಚಿಕಂಬಳ, ಕಾರ್ನಾಡು ಗ್ರಾಮದ ಪಡು ಬೈಲು ಪ್ರದೇಶಗಳು ಉಪ್ಪು ನೀರಿನ ಬಾವಿಗಳಿಂದ ಕೂಡಿರುವ ಪ್ರದೇಶಗಳಾಗಿವೆ. ಹೀಗಾಗಿ ಈ ಭಾಗದ ಬಹುತೇಕ ಜನರು ಕುಡಿ ಯುವ ನೀರಿಗಾಗಿ ನಗರ ಪಂಚಾಯತ್‌ನ ನಳ್ಳಿ ನೀರನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕೊಳಚಿ ಕಂಬಳ ಮತ್ತು ಚಂದ್ರ ಶ್ಯಾನುಭಾಗರ ಕುದ್ರು ಪ್ರದೇಶದಲ್ಲಿ ಸಂಪೂರ್ಣವಾಗಿ ನಳ್ಳಿ ನೀರನ್ನೇ ಬಳಸಬೇಕಿದೆ.
ಇದರಲ್ಲಿ 10 ವಾರ್ಡ್‌ಗಳಿಗೆ ನಗರ ಪಂಚಾಯತ್ ಹೊಂದಿರುವ ತೆರೆದ ಬಾವಿ, ಬೋರ್‌ವೆಲ್ ಮತ್ತು ಕೊಳವೆ ಬಾವಿಗಳ ಮೂಲಕ ನೀರನ್ನು ಎರಡು ದಿನಗಳಿಗೊಮ್ಮೆ ಒಂದು ಗಂಟೆ ಸರಬರಾಜು ಮಾಡಲಾಗುತ್ತಿದೆ. ಉಳಿದ ಏಳು ವಾರ್ಡ್‌ಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಲಾಗುತ್ತಿರುವ ನೀರಿನಿಂದ ಮೂರು ದಿನಗಳಿಗೊಮ್ಮೆ ಒಂದು ಗಂಟೆಗಳ ಕಾಲ ಒದಗಿಸಲಾಗುತ್ತಿದೆ. ಆದರೆ ನದಿಯಿಂದ ನೀರನ್ನು ಬಳಸಲು ಸಾಧ್ಯವಿರುವ ಮೂಲ್ಕಿ ನಗರ ಪಂಚಾಯತ್‌ನ ಜನರಿಗೆ ಪರಿಪೂರ್ಣವಾಗಿ ಕುಡಿಯುವ ಮತ್ತು ಇತರ ಬಳಕೆಗೆ ನೀರು ಒದಗಿಸಲು ನ.ಪಂ. ಕೂಡ ಕಷ್ಟು ಕಷ್ಟಪಡಬೇಕಾಗಿದೆ. ಪ್ರತಿ ಬೇಸಗೆಯಲ್ಲಿ ನೀರಿರುವ ಹೊರಗಿನ ಪ್ರದೇಶಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಕೆಲವೆಡೆಗಳಲ್ಲಿ ಸರಬರಾಜು ಟ್ಯಾಂಕ್‌ಗೆ ತುಂಬಿಸುವ ಕೆಲಸ ನಡೆಯುತ್ತಿದ್ದರೆ, ಇನ್ನು ಕೆಲವು ಮನೆಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಸರಕಾರದ ನೀರು ಸರಬರಾಜು ಮಂಡಳಿಯಿಂದ ಈ ಬಾರಿ ದಿನದ 24 ಗಂಟೆಗಳ ಕಾಲ ನೀರನ್ನು ಒದಗಿಸುವ ಯೋಜನೆಯನ್ನು 14 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆಯಾದರೂ ಇದಕ್ಕೆ 24 ಗಂಟೆಗಳ ಕಾಲ ನೀರು ಮಂಗಳೂರು ಮನಪಾ ಯಾವ ಮೂಲದಲ್ಲಿ ಪಡೆಯಬಹುದು ಎಂಬುದೇ ಅಧಿಕಾರಿಗಳಿಗೆ ತಲೆನೋವಿನ ಪ್ರಶ್ನೆಯಾಗಿದೆ.
Related Articles
ನಗರ ಪಂಚಾಯತ್ ವತಿಯಿಂದ ನೀರು ಸರಬರಾಜು ವ್ಯವಸ್ಥೆಗಾಗಿ ಸುಮಾರು 28 ಕೊಳವೆ ಬಾವಿ ಮತ್ತು 20 ತೆರೆದ ಬಾವಿಗಳ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದ್ದರೂ, ನೀರಿನ ಒರತೆಯ ಸಮ ಸ್ಯೆಯಿಂದಾಗಿ ಫೆಬ್ರವರಿ ತಿಂಗಳಿನಿಂದ ನೀರಿನ ಸಮಸ್ಯೆ ಕಾಡುತ್ತಿದೆ. ನಗರ ಪಂಚಾಯತ್ ಕುಡಿಯುವ ನೀರಿನ ಪೂರೈಕೆಗೆ ಸಿದ್ಧವಾಗಿಯೇ ಇದೆ. ಅದಲ್ಲದೆ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ನೀರಿಂಗಿಸುವ ಯೋಜನೆಗೆ ಒತ್ತು ಕೊಟ್ಟು ಒರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
– ಇಂದೂ ಎಂ.
ಮುಖ್ಯಾಧಿಕಾರಿಗಳು ನಗರ
ಪಂಚಾಯತ್, ಮೂಲ್ಕಿ
Advertisement
2020ರ ವೇಳೆಗೆ ನೀರು ಸಿಗುವ ಸಾಧ್ಯತೆಈಗ ನಗರ ಪಾಲಿಕೆಯ ಸಹಕಾರದಿಂದ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಗೆ 0.3 ಎಂಎಲ್‌ಡಿ ಯಷ್ಟು ನೀರನ್ನು ಪಡೆಯಲಾಗುತ್ತಿದೆ. ಕುಡಿಯುವ ಉನ್ನತೀಕರಣದ ಯೋಜನೆ ಪೂರ್ಣಗೊಂಡ ಅನಂತರ ಮಹಾನಗರ ಪಾಲಿಕೆಯಿಂದ 4 ಎಂಎಲ್‌ಡಿ ನೀರು ಸರಬರಾಜು ಆದಲ್ಲಿ 2020ರ ವೇಳೆಗೆ ಪ್ರತಿ ಮನೆಗೆ ನಿರಂತರವಾಗಿ ಸಾಕಷ್ಟು ಪ್ರಮಾಣದ ನೀರು ಸಿಗುವುದು ಸಾಧ್ಯವಾಗಬಹುದು.
- ಸುನೀಲ್ ಆಳ್ವ , ಅಧ್ಯಕ್ಷರು, ನಗರ ಪಂಚಾಯತ್ ಮೂಲ್ಕಿ ಸರ್ವೋತ್ತಮ ಅಂಚನ್