Advertisement
ಉದ್ಘಾಟನೆ ನೆರವೇರಿಸಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಹಲವು ದಶಕಗಳಿಂದ ವಿಶ್ವಾ ಸಾರ್ಹ ಹಾಗೂ ಗುಣಮಟ್ಟದ ವ್ಯವಹಾರವನ್ನು ಕಾಯ್ದುಕೊಂಡ ಕಾರಣಕ್ಕೆ ಮುಳಿಯ ಸಂಸ್ಥೆ ಜನಪ್ರಿಯತೆಯನ್ನು ಗಳಿಸಿದೆ ಎಂದು ಶ್ಲಾ ಸಿದರು.
ಅಡಿಕೆಗೂ ಚಿನ್ನಕ್ಕೂ ನಿಕಟ ಸಂಬಂಧವಿದೆ. ಕರಾವಳಿಯಲ್ಲಿ ಅಡಿಕೆ ಬೆಲೆ ಉತ್ತಮವಾಗಿದ್ದಾಗ ಚಿನ್ನಾಭರಣದ ವ್ಯಾಪಾರವೂ ಉತ್ತಮವಾಗಿರುತ್ತದೆ ಎಂದು ಹೇಳಿದ ಅವರು, ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಿ ಆಯ್ಕೆಯಾದಾಗ ಮುಳಿಯ ಸಂಸ್ಥೆಯಲ್ಲಿ ತಯಾರಿಸಲಾಗಿರುವ ಅಡಿಕೆಯ ಚಿನ್ನದ ಹಾರವನ್ನು ಹಾಕಿ ಅಭಿನಂದಿಸುವ ಇಚ್ಛೆ ಇದೆ ಎಂದರು. ಹೂಡಿಕೆಯ ಭಾಗ
ಮುಖ್ಯ ಅತಿಥಿಯಾಗಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಜ್ಯೋತಿ ಮಾತನಾಡಿ, ಚಿನ್ನೋತ್ಸವದ ಮೂಲಕ ಮುಳಿಯದ ಚಿನ್ನ ಇನ್ನಷ್ಟು ಗ್ರಾಹಕರನ್ನು ತಲುಪಬಹುದು ಎಂದರು.
Related Articles
Advertisement
ಪರಿಶುದ್ಧತೆಯ ಚಿನ್ನಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಹಕರಿಗೆ ಹೊಸತನದ ಆಯ್ಕೆಯ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮುಳಿಯ ಸಂಸ್ಥೆ ಯೋಜನೆಗಳನ್ನು ಹಾಕಿಕೊಳ್ಳುತ್ತದೆ. ಶುದ್ಧತೆ ಮೀರಿದ ಪರಿಶುದ್ಧತೆಯತ್ತ ನಮ್ಮ ವ್ಯವಹಾರ ನಡೆ ಸಾಗುತ್ತಿದೆ. ಕೇವಲ 48 ಗಂಟೆಗಳಲ್ಲಿ ಗ್ರಾಹಕರ ಆಯ್ಕೆಯ ಚಿನ್ನಾಭರಣ ತಯಾರಿಸಿ ನೀಡಲಾಗುತ್ತಿದೆ ಎಂದರು. ಸಂಸ್ಥೆಯ ಹಿರಿಯರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಮತ್ತು ಸುಲೋಚನಾ ಶ್ಯಾಮ ಭಟ್, ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣಪ್ರಸಾದ್ ಮುಳಿಯ ವೇದಿಕೆಯಲ್ಲಿದ್ದರು.
ನಿರ್ದೇಶಕರಾದ ಕೃಷ್ಣವೇಣಿ, ಅಶ್ವಿನಿ ಮತ್ತು ಶೋಭಾ ಸರಸ್ವತಿ, ಶಾಖಾ ಪ್ರಬಂಧಕ ನಾಮದೇವ್ ಮಲ್ಯ ಅತಿಥಿಗಳನ್ನು ಗೌರವಿಸಿದರು. ಕನ್ಸಲ್ಟೆಂಟ್ ವೇಣು ಶರ್ಮಾ ಸ್ವಾಗತಿಸಿ, ಸಂಜೀವ ಕಾರ್ಯಕ್ರಮ ನಿರ್ವಹಿಸಿದರು.