ನವದೆಹಲಿ: ಸಮಾಜವಾದಿ ಪಕ್ಷದ ಮುಖಂಡ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತಾ ಶನಿವಾರ (ಜುಲೈ 09) ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಮರನಾಥ: ಮೇಘಸ್ಫೋಟಕ್ಕೆ ಮೊದಲೇ ಸುರಕ್ಷಿತವಾಗಿ ತೆರಳಿದ್ದ ಕಲಬುರಗಿಯ ಯಾತ್ರಾರ್ಥಿಗಳು
ಶ್ವಾಸಕೋಶದ ಸೋಂಕಿನಿಂದಾಗಿ ಸಾಧನಾ ಅವರು ಗುರ್ಗಾಂವ್ ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಧಾ ಗುಪ್ತಾ ಅವರ ನಿಧನಕ್ಕೆ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಲಾಯಂ ಮತ್ತು ಕುಟುಂಬ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಸಾಧನಾ ಗುಪ್ತಾ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ. ಮುಲಾಯಂ ಸಿಂಗ್ ಯಾದವ್ ಮೊದಲ ಪತ್ನಿ ಮಾಲತಿ ದೇವಿ 2003ರ ಮೇ ನಲ್ಲಿ ಸಾವನ್ನಪ್ಪುವವರೆಗೂ ಸಾಧನಾ ಬಗ್ಗೆ ಯಾರಿಗೂ ತಿಳಿದಿರಲಿಲ್ಲವಾಗಿತ್ತು. ಮಾಲತಿ ದೇವಿ ಪುತ್ರ ಅಖಿಲೇಶ್ ಯಾದವ್ 2012ರಿಂದ 2017ರವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಮುಲಾಯಂ ಸಿಂಗ್ ಯಾದವ್ ಸಾಧನಾ ಗುಪ್ತಾ ಜೊತೆ ಸಂಬಂಧ ಹೊಂದಿದ್ದರು. 2007ರ ಫೆಬ್ರವರಿಯಲ್ಲಿ ಸಾಧನಾ ಗುಪ್ತಾ ಅವರು ಮುಲಾಯಂ ಜೊತೆಗಿನ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.