Advertisement

ಮೂಲರಪಟ್ಣ -ಬಿ.ಸಿ. ರೋಡ್‌ ಸರಕಾರಿ ಬಸ್‌ ಸೇವೆ ಆರಂಭ

11:23 AM Jul 02, 2018 | |

ಬಂಟ್ವಾಳ : ಮೂಲರಪಟ್ಣ ಸೇತುವೆ ಕುಸಿತದ ಬಳಿಕ ಇದೇ ಮೊದಲಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಆಗುವಂತೆ ಕೆಎಸ್‌ಆರ್‌ ಟಿಸಿ ಆರಂಭಿಸಿದ ಮೂಲರಪಟ್ಣ – ಮಂಗಳೂರು ಸಂಪರ್ಕದ ಬಸ್‌ ಸೇವೆಗೆ ಜು. 1ರಂದು ಬೆಳಗ್ಗೆ ಅರಳ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ ಆಳ್ವ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.

Advertisement

ಸೇತುವೆ ಕುಸಿದ ಬಳಿಕ ಈ ಭಾಗದ ಜನರು ಸಾರ್ವಜನಿಕ ಬಸ್‌ ಸೌಕರ್ಯದಿಂದ ವಂಚಿತರಾಗಿದ್ದರು. ಈ ಭಾಗದ ಜನರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಜಿಲ್ಲಾಧಿಕಾರಿಗಳು ಹಾಗೂ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಸೂಚನೆಯಂತೆ ಬಸ್‌ ಸೌಕರ್ಯ ಆರಂಭಿಸಲಾಗಿತ್ತು. ಮೂಲರಪಟ್ಣದಿಂದ ಬಿ.ಸಿ. ರೋಡ್‌ಗೆ ಒಟ್ಟು ಎರಡು ಬಸ್‌ಗಳು ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕ ಅನುಕೂಲ ಸಮಯ ನೋಡಿಕೊಂಡು ಸಂಚರಿಸಲಿದೆ.

ಬಸ್‌ಗೆ ಚಾಲನೆ ನೀಡಿದ ಸಂದರ್ಭ ಮುಲಾರಪಟ್ಣ ಕೇಂದ್ರ ಜುಮಾ ಮಸೀದಿ ಧರ್ಮಗುರು ಅಲ್‌ಹಾಜ್‌ ಅಬ್ದುಲ್‌ ಖಾದರ್‌ ಮದನಿ, ಗ್ರಾ.ಪಂ. ಸದಸ್ಯ ಎಂ.ಬಿ. ಅಶ್ರಫ್‌ ಅರಳ, ಹಾಜಬ್ಬ ಬಡಗಬೆಳ್ಳೂರು, ಗುತ್ತಿಗೆದಾರ ಎಂ.ಬಿ. ಶಾಪಿ, ಪ್ರಮುಖರಾದ ಎಂ.ಎಸ್‌. ಶಾಲಿ, ಸಜೀವುದೀನ್‌ ಎಂ.ಎಸ್‌., ವಿ. ಪುತ್ತುಮೋನು ಎಂ.ಪಿ., ನಾಸೀರ್‌, ಗಣೇಶ್‌ ಭಟ್‌ ಎರ್ಮಾಳ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next