Advertisement

ಮಳಖೇಡ ಅಭಿವೃದಿಗೆ ಒತ್ತಾಯ

07:14 PM Jun 30, 2021 | Team Udayavani |

ಕಲಬುರಗಿ: ಕನ್ನಡದ ಮೊದಲು ಗದ್ಯ ಕೃತಿ ಕವಿರಾಜಮಾರ್ಗ ರಚನೆಯಾದ ಐತಿಹಾಸಿಕ ಸ್ಥಳ, ಕನ್ನಡದ ಹಿರಿಮೆಯನ್ನು ವಿಶ್ವಕ್ಕೆ ತಿಳಿಸಿಕೊಟ್ಟ ನೆಲ ರಾಷ್ಟ್ರಕೂಟರ ರಾಜಧಾನಿ ಮಳಖೇಡವನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಿ ಅಭಿವೃದ್ಧಿಪಡಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ವತಿಯಿಂದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ನಗರದ ಐವಾನ್‌-ಇ-ಶಾಹಿ ಅತಿಥಿ ಗೃಹದಲ್ಲಿ ಸಚಿವರನ್ನು ಸಂಘಟನೆಯ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಳಖೇಡ ತಾಣವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ತನ್ನ ಆಳ್ವಿಕೆಯ ಅವ ಧಿಯಲ್ಲಿ ಜನಪರ ಕೆಲಸಗಳ ಮೂಲಕ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟದಂತೆ ನಿರ್ಮಿಸಿ ಸುಭಿಕ್ಷೆಯನ್ನಾಗಿಸಿದ ದೊರೆ ಅಮೋಘವರ್ಷ ನೃಪತುಂಗರ ಪ್ರತಿಮೆಯನ್ನು ಕಲಬುರಗಿ ನಗರದಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ರಾಷ್ಟ್ರಕೂಟ ಸಾಮ್ರಾಜ್ಯದ ಮೂಲ ನೆಲವನ್ನು ಇಲ್ಲಿಯವರೆಗೂ ಆಳಿರುವ ಎಲ್ಲ ಸರ್ಕಾರಗಳು ಮರೆಯುವ ಕೆಲಸ ಮಾಡಿಕೊಂಡೆ ಬಂದಿವೆ. ಇತಿಹಾಸ ಪುಟದಲ್ಲಿ ಕಲಬುರಗಿ ಎಂದರೇ ನೆನಪಾಗುವುದು ರಾಷ್ಟ್ರಕೂಟ ರಾಜ್ಯ ಮನೆತನದಿಂದ. ಇಂತಹ ರಾಜ್ಯ ಮನೆತನ ಆಳಿದ ರಾಜ್ಯಧಾನಿ ಕೇಂದ್ರ ನೋಡಿದರೆ ಇತಿಹಾಸ ಪ್ರೇಮಿಗಳಿಗೆ ಕಣ್ಣೀರು ಬರುವಂತಹ ಸ್ಥಿತಿಯಲ್ಲಿ ಇದೆ.

ತಮ್ಮ ಅವ ಧಿಯಲ್ಲಿ ಆದರೂ ಮಳಖೇಡವನ್ನು ಅಭಿವೃದ್ಧಿಪಡಿಸಿ ಅದಕ್ಕೆ ಪ್ರವಾಸೋದ್ಯಮದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ, ಮುಖಂಡರಾದ ಸಂತೋಷ ಪಾಟೀಲ, ಮಹಾಂತೇಶ ಹರವಾಳ, ಋಷಿ ಬೆನಕನಳ್ಳಿ, ಶ್ರೀಕಾಂತ್‌ ರೆಡ್ಡಿ, ದೀಲಿಪ್‌ ಕಿರಸವಳಗಿ, ಮಹೇಶ್‌ ಫರತಾಬಾದ ಮತ್ತು ನೂರ ಹೈಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next