Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲಿ ವಕೀಲರ ವಾಸ್ತವ್ಯ

03:28 AM Apr 11, 2020 | Hari Prasad |

ಲಕ್ನೋ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಭೋಪಾಲದ ವೈದ್ಯರೊಬ್ಬರು ಕಾರ್‌ನಲ್ಲಿ ವಾಸಿಸುವ ವಿಚಾರ ಈಗಾಗಲೇ ವೈರಲ್‌ ಆಗಿದೆ. ಇದೀಗ ಉತ್ತರಪ್ರದೇಶದ, ಹಾರ್ಪು ಎನ್ನುವ ಗ್ರಾಮದ ನಿವಾಸಿ ಮುಕುಲ್‌ ತ್ಯಾಗಿ ಮರದಲ್ಲಿ ವಾಸ್ತವ್ಯ ಮಾಡಿದ್ದಾರೆ. ವಕೀಲರಾಗಿರುವ ಅವರು, ಅಗತ್ಯಕ್ಕೆ ಬೇಕಾದ ವಸ್ತುಗಳು ಸೇರಿದಂತೆ ಪುಸ್ತಕಗಳನ್ನೂ ಮರದ ಮೇಲೆಯೇ ಇಟ್ಟುಕೊಂಡಿದ್ದಾರೆ.

Advertisement

ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ರೀತಿಯ ವಾಸ್ತವ್ಯದ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ, ಮೆಚ್ಚುಗೆ ವ್ಯಕ್ತವಾಗಿದೆ. ವೈರಸ್‌ ನಿವಾರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದದ್ದು ಉತ್ತಮ ಎಂದಿದ್ದಾರೆ ತ್ಯಾಗಿ.

Advertisement

Udayavani is now on Telegram. Click here to join our channel and stay updated with the latest news.

Next