Advertisement

ಯೋಧ ಹಿನ್ನೆಲೆ ಚಿತ್ರ ಮುಕ್ತಿ; ಹನುಮಂತಪ್ಪ ಕೊಪ್ಪದ್‌ ಕಂಡ ಕನಸಿನ ಕಥೆ

03:19 PM Aug 23, 2018 | Sharanya Alva |

ಕನ್ನಡದಲ್ಲಿ ಯೋಧನ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಹೊಸಬರೆಲ್ಲ ಸೇರಿ ಹೊಸದೊಂದು ಸಿನಿಮಾ ಮಾಡಿದ್ದಾರೆ. ಆ ಚಿತ್ರಕ್ಕೆ “ಮುಕ್ತಿ’ ಎಂದು ನಾಮಕರಣ ಮಾಡಿದ್ದಾರೆ.  ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅಂದಹಾಗೆ, ಕೆ.ಶಂಕರ್‌ ಈ ಚಿತ್ರದ ನಿರ್ದೇಶಕರು. ಸಿ.ಕೆ.ಕೃಷ್ಣಮೂರ್ತಿ ಚಿತ್ರದ ನಿರ್ಮಾಪಕರು. 

Advertisement

ಇದು ಸಿಯಾಚಿನ್‌ ಹಿಮಪಾತದಲ್ಲಿ ಆರು ದಿನಗಳ ಕಾಲ ಸಿಲುಕಿ ದೇಶಕ್ಕಾಗಿ ಪ್ರಾಣಬಿಟ್ಟ ವೀರಯೋಧ ಹನುಮಂತಪ್ಪ ಕೊಪ್ಪದ್‌ ಅವರ ಕನಸೊಂದನ್ನು ತೆರೆ ಮೇಲೆ ಅನಾವರಣಗೊಳಿಸುವ ಕಥೆ ಹೊಂದಿದೆ. 

ಚಿತ್ರದಲ್ಲಿ ನಕುಲ್‌, ದೀಪಿಕಾ ಗೌಡ, ರಘುರಂಜನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ನಿರ್ದೇಶಕ ಶಂಕರ್‌ ಅವರಿಗೆ ನಂಬಿಕೆ ಇದೆ. ಇಷ್ಟಕ್ಕೂ ನಿರ್ದೇಶಕರು ಈ ಚಿತ್ರ ಮಾಡೋಕೆ ಕಾರಣ, ವೀರಮರಣ ಹೊಂದಿದ ಹನುಮಂತಪ್ಪ ಕೊಪ್ಪದ್‌ ಅವರು ರಜಾದಿನ ಕಳೆಯಲು ತನ್ನ ಹುಟ್ಟೂರಿಗೆ ಬಂದಾಗ ಗೆಳೆಯರ ಜೊತೆ ದೇಶದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಅದು ಸಮಸ್ಯೆ ಪರಿಹಾರ ಕುರಿತ ಚರ್ಚೆ. 
ಅದನ್ನೇ ಇಲ್ಲಿ ಮಾಡಲಾಗಿದೆ. ಪ್ರತಿಯೊಬ್ಬ ದೇಶ ಪ್ರೇಮಿ ಈ ಚಿತ್ರ ವೀಕ್ಷಿಸುವ ಮೂಲಕ ಅಗಲಿದ ಯೋಧನಿಗೊಂದು ಗೌರವ ಸಲ್ಲಿಸಬೇಕು ಎಂಬ ಮನವಿ ಚಿತ್ರತಂಡದ್ದು. ಬೆಟ್ಟದೂರು ಹಾಗೂ ಉತ್ತರಕರ್ನಾಟಕ ಸುತ್ತಮುತ್ತಲು ಚಿತ್ರೀಕರಣ ನಡೆಸಲಾಗಿದೆ.

ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಶುಭಕೋರಿ, ಯೋಧನ ಕುರಿತು ಮಾಡಿರುವ ಈ ಚಿತ್ರ ಯಶಸ್ಸು ಪಡೆಯಲಿ ಅಂದರು. ಭಾ.ಮ.ಹರೀಶ್‌, ಎಂ.ಎನ್‌.ಸುರೇಶ್‌, ಸಾಮ್ರಾಟ್‌ ಅಶೋಕ್‌ ಸಾಮ್ರಾಟ್‌ ಇತರರು ಚಿತ್ರಕ್ಕೆ ಶುಭಹಾರೈಸಿದ್ದಾರೆ. ಚಿತ್ರಕ್ಕೆ ಎಸ್‌.ಸಿ.ಸತೀಶ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸತೀಶ್‌ ಯಾದವ್‌, ಹೇಮಂತ್‌ಕುಮಾರ್‌ ಇತರೆ ತಂತ್ರಜ್ಞರು “ಮುಕ್ತಿ’ ಚಿತ್ರಕ್ಕೆ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next