Advertisement

ಪ್ರವಾಸಿ ತಾಣವಾಗದ ಮುಕ್ಕುಂದಾ ಮುರಾರಿ

06:38 PM Jun 27, 2021 | Team Udayavani |

ಸಿಂಧನೂರು: ಕಳೆದ ಎರಡೂ¾ರು ದಶಕಗಳಿಂದಲೂ ಐತಿಹಾಸಿಕ ಶಿಲ್ಪಕಲೆಗಳ ಮೂಲಕ ಗಮನ ಸೆಳೆಯುತ್ತಿರುವ ಮುಕ್ಕುಂದಾ ಸೋಮವೇಶ್ವರ ದೇವಸ್ಥಾನ ಪುನರುಜ್ಜೀವನಕ್ಕೆ ನಯಾಪೈಸೆಯೂ ಸಿಕ್ಕಿಲ್ಲ. ಆದರೂ, ಇಲ್ಲಿನ ಸ್ಮಾರಕಗಳು ರಕ್ಷಿಸಬೇಕೆಂಬ ಕೂಗು ಇತಿಹಾಸ ಪ್ರಿಯರು ಭೇಟಿ ನೀಡಿದಾಗೆಲ್ಲ ಕೇಳಿಬರುತ್ತವೆ.

Advertisement

ತಾಲೂಕಿನಲ್ಲಿ “ಮುಕ್ಕುಂದಿಯಂತಹ ಊರಿಲ್ಲ; ಮುರಾರಿಯಂತಹ ದೇವರಿಲ್ಲ’ ನಾಣ್ಣುಡಿ ಜನಪ್ರಿಯಗೊಂಡು ಹಲವು ದಶಕ ಗತಿಸಿವೆ. ಕಲ್ಲುಗಳಿಂದಲೇ ನಿರ್ಮಿತವಾದ ಈ ದೇವಸ್ಥಾನ ಬೇಸಿಗೆ ಸೇರಿದಂತೆ ವರ್ಷದ 12 ತಿಂಗಳು ವಯೋವೃದ್ಧರು ಹಾಗೂ ಗ್ರಾಮಸ್ಥರ ವಿಶ್ರಾಂತಿ ತಾಣವಾಗಿದೆ. ಬಿರುಬೇಸಿಗೆಯಲ್ಲೂ ತಂಪು ನೀಡುವ ಇಲ್ಲಿನ ಮುಕ್ಕುಂದಾ ಮುರಾರಿ, ರಾಜೇಶ್ವರಿ ದೇವಾಲಯ ಇಂದಿಗೂ ಜನಮನ ಸೆಳೆಯುತ್ತಿವೆ.

ಅಧ್ಯಯನಕ್ಕೆ ಸೀಮಿತ: ತಾಲೂಕು ಕೇಂದ್ರದಿಂದ 22 ಕಿ.ಮೀ. ಅಂತರದಲ್ಲಿರುವ ಇಲ್ಲಿನ ಪ್ರದೇಶದಲ್ಲಿ 500 ವರ್ಷಗಳ ಹಿಂದೆಯೇ ಮಹತ್ವದ ಸ್ಮಾರಕ ನಿರ್ಮಾಣಗೊಂಡಿವೆ. ವಿಜಯನಗರ ಅರಸರೇ ಮುಕ್ಕುಂದಾವನ್ನು ತಮ್ಮ ರಾಜಧಾನಿ ಮಾಡಿಕೊಳ್ಳಲು ಇಚ್ಛಿಸಿದ್ದರು ಎನ್ನುತ್ತಾರೆ ಇತಿಹಾಸಕಾರರು. ಅಂದಿನ ರಾಜರು ಇಲ್ಲಿನ ಕೋಟೆ ಕೊತ್ತಲಗಳ ಅಭಿವೃದ್ಧಿ ಹಾಗೂ ದೇವಸ್ಥಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆಂಬ ಕಾರಣಕ್ಕೆ ಐತಿಹಾಸಿಕ ದೇಗುಲಗಳು ಸಾಕ್ಷಿಯಾಗಿವೆ.

ಕಲ್ಲಿನಿಂದ ನಿರ್ಮಿತ ಸೋಮೇಶ್ವರ ದೇವಸ್ಥಾನ, ಹೊಯ್ಸಳ ಶೈಲಿಯ ಈಶ್ವರ ದೇವಸ್ಥಾನ, ಕೆತ್ತನೆಯ ಕಂಬಗಳು, ಪ್ರವೇಶದ್ವಾರ, ಸದೃಢ ಮೈಕಟ್ಟಿನ ಮುರಾರಿ ರಂಗನ ದೇವಾಲಯಗಳು ಶಿಲ್ಪಕಲೆಯ ವೈಭವಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿವೆ. ರಕ್ಷಣೆ ಹೆಸರಿಗೆ ಮಾತ್ರ: 20ಕ್ಕೂ ಹೆಚ್ಚು ಕೋಟೆ ಕೊತ್ತಲಗಳು, ದೇವಸ್ಥಾನಗಳಲ್ಲಿನ ಶಿಲ್ಪಕಲೆ ವೈಭವ ಅಧ್ಯಯನ ಯೋಗ್ಯವಾಗಿವೆ. ಸತತವಾಗಿ ಇತಿಹಾಸಕಾರರು ಇಲ್ಲಿಗೆ ಆಗಮಿಸಿ, ಇಲ್ಲಿನ 500 ವರ್ಷಗಳ ಇತಿಹಾಸವನ್ನು ಅವಲೋಕಿಸಿ, ಶಾಸನಗಳ ಸಾಕ್ಷÂವನ್ನು ಆಧರಿಸಿ ಇತಿಹಾಸ ಸಾರುವ ಪ್ರಯತ್ನ ಮಾಡುತ್ತಾರೆ. ಪೂರ್ವಕ್ಕೆ ತುಂಗಭದ್ರಾ ನದಿ, ಪಶ್ಚಿಮಕ್ಕೆ ಬೆಟ್ಟ ಆವರಿಸಿದ ಪ್ರದೇಶದಲ್ಲಿನ ಸ್ಮಾರಕಗಳು ಅಧ್ಯಯನ ಯೋಗ್ಯವಾಗಿವೆ. ಇಲ್ಲಿನ ಶಿಲ್ಪಕಲೆಗಳು ಹಲವು ಪುರಾವೆಗಳನ್ನು ನೀಡುತ್ತಿವೆ.

ಇತಿಹಾಸ ಬಲ್ಲ ವ್ಯಕ್ತಿಗಳು ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸಿ ಹೋಗುವುದು ಸಾಮಾನ್ಯವಾಗಿದೆ. ಇವುಗಳ ಸಂರಕ್ಷಣೆ, ಇತಿಹಾಸದ ಫಲಕಗಳನ್ನು ಅಳವಡಿಸುವ ಕೆಲಸ ಆಡಳಿತದಿಂದ ಸಾಧ್ಯವಾಗಿಲ್ಲ. ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರೂ ಪ್ರವಾಸಿ ತಾಣವನ್ನಾಗಿ ರೂಪಿಸಲು ಗಮನ ಹರಿಸುತ್ತಿಲ್ಲ. ಬರೀ ಹೆಸರಿಗೆ ಮಾತ್ರ ಮುಕ್ಕುಂದಿ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿ¨

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next