ಸುರತ್ಕಲ್: ಬದುಕಿನಲ್ಲಿ ಸಂತ ಸದ ಕ್ಷಣಗಳನ್ನು ಪಡೆಯಬೇಕಾದರೆ ಇತರ ರೊಂದಿಗೆ ಕೂಡಿಕೊಂಡು ನಂಬಿಕೆ, ಪ್ರೀತಿ ವಿಶ್ವಾಸದಿಂದ ಬಾಳಿದಾಗ ಮಾತ್ರ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನುಡಿದರು.
ಮುಖ್ಯ ಅತಿಥಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಸಮಾಜದ ಏಳಿಗೆಗೆ ಒಳಿತಿಗಾಗಿ ಸರ್ವ ಧರ್ಮ ಸಮನ್ವಯತೆಯೊಂದಿಗೆ ಬದುಕು ನಡೆಸಬೇಕು ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಸಮಾಜದಲ್ಲಿ ಎಲ್ಲ ಜನರೊಂದಿಗೆ ಬೆರೆತು ಪರಸ್ಪರ ಸಹಕಾರ, ಸಹಾಯ ಮಾಡುತ್ತಾ ನಾವು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವನ್ನು ಹೊಂದಬೇಕು ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಹೊಂದಲು ಸಾಧ್ಯ ಎಂದರು.
ಬ್ಲೋಸಮ್ ಫೆರ್ನಾಂಡಿಸ್, ಉದ್ಯಮಿ ಲಿಯೋ ರೋಡ್ರಿಗಸ್, ಸಿಸ್ಟರ್ ಸಂಧ್ಯಾ ಸುಪೀರಿಯರ್, ಧರ್ಮಗುರು ವಂ| ಹೇರಾಲ್ಡ್ ಡಿ’ಸೋಜಾ, ಧರ್ಮಗುರು ವಂ| ನಾರ್ಬರ್ಟ್ ಡಿ’ಸೋಜಾ, ಕಾರ್ಪೊರೇಟರ್ ರೇವತಿ ಪುತ್ರನ್ ಉಪಸ್ಥಿತರಿದ್ದರು.
ಹೋಲಿ ಸ್ಪಿರಿಟ್ ಚರ್ಚ್ ಮುಕ್ಕ ಪ್ರಧಾನ ಧರ್ಮಗುರು ವಂ| ಸಿರಿಲ್ ಪಿಂಟೋ ಸ್ವಾಗತಿಸಿದರು. ಕಾರ್ಯದರ್ಶಿ ಶೈಲಾ ಡಿ’ಸೋಜಾ ವಂದಿಸಿದರು. ಅನಿತಾ ಡಿ’ಸೋಜಾ, ಸೋನಿಯಾ ಡಿ’ಸೋಜಾ ನಿರೂಪಿಸಿದರು.
ಸಮ್ಮಾನ
ಹೋಲಿ ಸ್ಪಿರಿಟ್ ಮುಕ್ಕ ಚರ್ಚ್‌ನಲ್ಲಿ ಸೇವೆಗೈದ ಧರ್ಮಗುರುಗಳನ್ನು ಮತ್ತು ಚರ್ಚ್‌ಗೆ ಸಹಾಯ ನೀಡಿದ ದಾನಿಗಳನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.