ಯಾದಗಿರಿ: ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಜನಸಂಘದ ಸ್ಥಾಪನೆಗೂ ಮುಂಚಿನ ಹೋರಾಟಗಳು, ದೃಢ ಸಂಕಲ್ಪ, ಅಲ್ಲದೆ ಅಚಲ ಸಿದ್ಧಾಂತ, ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಮನೋಸ್ಥೈರ್ಯದ ಜತೆಗೆ ತ್ಯಾಗದ ಕುರಿತ ಇತಿಹಾಸವನ್ನು ಪ್ರತಿಯೊಬ್ಬ ಭಾರತೀಯ ಅರಿತುಕೊಳ್ಳಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ದಿವಂಗತ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಏಕತೆಗಾಗಿ ಅವರು ಹೋರಾಡಿದ್ದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು. ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ, ಮುಖರ್ಜಿ ಅವರಿಂದ ಕಾಶ್ಮೀರವನ್ನು ಪೂರ್ಣವಾಗಿ ಭಾರತದಲ್ಲಿ ಸೇರಿಸಲು
ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಮೊದಲಿಗರು ಎಂದು ಸ್ಮರಿಸಿದರು.
ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ, ವೆಂಕಟರಡ್ಡಿ ತುಮಕೂರು, ಚನ್ನುಗೌಡ ಬಿಳಾರ, ರವಿ ಮಾಲಿಪಾಟೀಲ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಯಾದಗಿರಿ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಎಂ. ಕಲಾಲ್, ಖಂಡಪ್ಪ ದಾಸನ್, ಪರಶುರಾಮ್ ಕುರಕುಂದಿ, ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ, ಹಣಮಂತ ಇಟಗಿ, ಮಂಜುನಾಥ್ ಜಡಿ, ಮಲ್ಲನಗೌಡ ಗುರುಸುಣಿಗಿ, ಮನೋಹರ ಪವಾರ್, ರಮದೇವಿ ಕಾವಲಿ, ಶರಣು ಆಶನಾಳ, ಸ್ನೇಹಾ ರಸಳಕರ, ಪರ್ವಿನ್ ಬೇಗಂ, ಗೋವಿಂದಪ್ಪ ಕೊಂಚಾಟ್ಟಿ, ಮಲ್ಲು ಕೋಲಿವಾಡ, ಚಂದ್ರಶೇಖರ್ ಕಡೆಚೂರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.