Advertisement

Mollywood #MeToo; ಶಾಸಕ ಮುಖೇಶ್ ರಾಜೀನಾಮೆ ನೀಡಬೇಕಾಗಿಲ್ಲ:ಆಡಳಿತಾರೂಢ ಸಿಪಿಐ(ಎಂ)

01:35 AM Sep 01, 2024 | Team Udayavani |

ತಿರುವನಂತಪುರಂ: ನಟ, ಆಡಳಿತಾರೂಢ ಸಿಪಿಐ(ಎಂ) ಶಾಸಕ ಎಂ. ಮುಖೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಕೇರಳ ಸರಕಾರ ಶನಿವಾರ ಹೇಳಿದೆ.

Advertisement

ಪಕ್ಷದ ರಾಜ್ಯ ಸಮಿತಿ ಸಭೆಯ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು.

ಮುಖೇಶ್ ಅವರ ವಿರುದ್ಧದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಚಲನಚಿತ್ರ ನಿರ್ಮಾಣ ನೀತಿ ಸಮಿತಿಯಿಂದ ತೆಗೆದುಹಾಕಲು ಪಕ್ಷ ನಿರ್ಧರಿಸಿದೆ. ಆರೋಪಿತ ಶಾಸಕನೊಬ್ಬ ನೈತಿಕ ನೆಲೆಯಲ್ಲಿ ರಾಜೀನಾಮೆ ನೀಡಿದರೆ, ಒಂದು ವೇಳೆ ಅವರು ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಅದೇ ಸ್ಥಾನಕ್ಕೆ ಹಿಂತಿರುಗಿ ನೀಡಲಾಗುತ್ತದೆಯೇ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪ್ರಶ್ನಿಸಿದರು.
ದೇಶದಲ್ಲಿ 16 ಸಂಸದರು ಮತ್ತು 135 ಶಾಸಕರು ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಆರೋಪ ಹೊತ್ತಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಗೋವಿಂದನ್ ಹೇಳಿದರು.

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ಕೊಚ್ಚಿ ನಗರದ ಮರಡು ಪೊಲೀಸ್ ಠಾಣೆಯಲ್ಲಿ ನಟ/ ಶಾಸಕ ಮುಖೇಶ್ ವಿರುದ್ಧ ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವರ್ಷಗಳ ಹಿಂದೆ ಮುಖೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆಕೆ ಆರೋಪಿಸಿದ್ದಾರೆ.

Advertisement

ನಾನು ಯಾವುದೇ ಪವರ್ ಗ್ರೂಪ್ ನ ಭಾಗವಾಗಿಲ್ಲ: ಮೋಹನ್ ಲಾಲ್

ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದ ನಂತರ AMMA (Association of Malayalam Movie Artists) ನ ಮಾಜಿ ಅಧ್ಯಕ್ಷ ಮೋಹನ್‌ಲಾಲ್ ಅವರು ಶನಿವಾರ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ನಾನು ಚಿತ್ರರಂಗದ ಯಾವುದೇ ಶಕ್ತಿ ಗುಂಪಿನ ಭಾಗವಾಗಿಲ್ಲ ಮತ್ತು ಅಂತಹ ಯಾವುದೇ ಗುಂಪಿನ ಅಸ್ತಿತ್ವದ ಬಗ್ಗೆ ನನಗೆ ತಿಳಿದಿಲ್ಲ ಎಂದು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಹೇಳಿಕೆ ನೀಡಿದ್ದಾರೆ.

ಇಡೀ ಮಲಯಾಳ ಚಿತ್ರರಂಗ ಸ್ತ್ರೀಶೋಷಕವಲ್ಲ. ಚಿತ್ರರಂಗ­ವನ್ನು ಹಾಳು ಮಾಡಬೇಡಿ ಎಂದು ಹೇಳಿ­ದ್ದಾರೆ. ಎಲ್ಲ ವಿಷಯಗಳ ಬಗ್ಗೆ AMMA ಮಾತನಾಡಲು ಸಾಧ್ಯವಿಲ್ಲ. ತಪ್ಪಿತ­ಸ್ಥರಿಗೆ ಶಿಕ್ಷೆಯಾಗಬೇಕು’ ಎಂದರು.

ಕಿರುಕುಳ ಪ್ರಕರಣದಲ್ಲಿ ಅಮ್ಮ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಬೇಡಿ. ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಚಿತ್ರರಂಗವನ್ನು ನಾಶ ಮಾಡಬೇಡಿ. ನಾವು ಹೇಮಾ ಸಮಿತಿ ವರದಿಯನ್ನು ಸ್ವಾಗತಿಸುತ್ತೇವೆ. ರಾಜ್ಯ ಸರಕಾರ ಈ ವರದಿಯನ್ನು ಬಿಡುಗಡೆ ಮಾಡಿರು­ವುದು ಸರಿಯಿದೆ. ಹಲವರು ಇದರಲ್ಲಿ ಭಾಗಿಯಾಗಿರಬಹುದು. ಆದರೆ ಇದ­ಕ್ಕಾಗಿ ಎಲ್ಲ ನಟರನ್ನೂ ದೂಷಿಸುವುದು ಸರಿಯಲ್ಲ ಎಂದರು.

ಮಲಯಾಳಂ ಚಿತ್ರರಂಗವು ಸಾವಿರಾರು ಜನರು ಕೆಲಸ ಮಾಡುವ ದೊಡ್ಡ ಉದ್ಯಮವಾಗಿದೆ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ  ದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ವಿವಿಧ ನಿರ್ದೇಶಕರು ಮತ್ತು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ ಅನೇಕ ಉನ್ನತ ಮಲಯಾಳಂ ಚಿತ್ರರಂಗದ ವ್ಯಕ್ತಿಗಳ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next