Advertisement

ಪೆಟ್ಟು ಕೊಟ್ಟ ಅಮಾನ್ಯ ಮುಖೇಶ್‌ ಅಗ್ರಮಾನ್ಯ

03:45 AM Mar 08, 2017 | Team Udayavani |

ಮುಂಬೈ: ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರ, ದೇಶದ ಆರ್ಥಿಕತೆಗೆ ಪೆಟ್ಟು ನೀಡಿದ್ದು, ಭಾರತ ಆರ್ಥಿಕವಾಗಿ “ಕಠಿಣ ವರ್ಷ’ವನ್ನು ಎದುರಿಸುತ್ತಿದೆ ಎಂಬ ಅಂಶ ಜಾಗತಿಕ ಶ್ರೀಮಂತರ ಪಟ್ಟಿಯೊಂದರ ಮೂಲಕ ಬೆಳಕಿಗೆ ಬಂದಿದೆ. ಆದಾಗ್ಯೂ ಪ್ರತಿಷ್ಠಿತ ಉದ್ಯಮಿ ಮುಖೇಶ್‌ ಅಂಬಾನಿ, ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ.

Advertisement

ಹರುನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ ಇಂಡಿಯಾ ಮಂಗಳವಾರ ಬಿಡುಗಡೆಗೊಳಿಸಿರುವ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, 2016ರ ನವೆಂಬರ್‌ 8ರಂದು ಆರಂಭವಾದ ನೋಟು ಅಮಾನ್ಯ ಕ್ರಮದಿಂದಾಗಿ ದೇಶದ 11 ಮಂದಿ ಬಿಲೆನಿಯರ್‌ಗಳ ಸಂಪತ್ತು ಒಂದು ಬಿಲಿಯನ್‌ ಡಾಲರ್‌ ಮಿತಿಗಿಂತಲೂ ಕೆಳ ಹಂತಕ್ಕೆ ಕುಸಿದಿದೆ ಎನ್ನಲಾಗಿದೆ. ಹಾಗೆಂದು ಬಿಲಿಯನ್‌ ಹಾಗೂ ಅದಕ್ಕಿಂತಲೂ ಹೆಚ್ಚು ಮೌಲ್ಯದ ಸಂಪತ್ತು ಹೊಂದಿರುವ ಭಾರತ ಮೂಲದ 132 ಬಿಲಿಯನೇರ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವರದಿಯಾಗಿದೆ.
“”ಭಾರತ ಸರ್ಕಾರ ಕೈಗೊಂಡ ನೋಟು ಅಮಾನ್ಯದಂತಹ ಕ್ರಮಗಳಿಂದಾಗಿ ದೇಶವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಆದರೂ ದೀರ್ಘಾವಧಿಯ ದೃಷ್ಟಿಯಿಂದ ನೋಡಿದಾಗ, ಈ ರೀತಿಯ ಪಾರದರ್ಶಕ ಕರೆನ್ಸಿ ಆರ್ಥಿಕ ನೀತಿಗಳಿಂದ ಭವಿಷ್ಯದಲ್ಲಿ ಉದ್ಯಮಿಗಳಿಗೆ ಸಕಾರಾತ್ಮಕ ಪ್ರಯೋಜನಗಳಾಗಳಿವೆ,” ಎಂದು ಹರುನ್‌ ರಿಪೋರ್ಟ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಸಂಶೋಧಕ ರಹಮಾನ್‌ ಜುನೈದ್‌ ಅಭಿಪ್ರಾಯಪಟ್ಟಿದ್ದಾರೆ.
ಅಂಬಾನಿಗೆ ಅಗ್ರ ಸ್ಥಾನ: ಪ್ರಸ್ತುತ ದೂರ ಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಬಿರುಗಾಳಿ ಎಬ್ಬಿಸಿರುವ ರಿಲಾಯನ್ಸ್‌ ಇಂಡಸ್ಟ್ರೀಸ್‌ ಒಡೆಯ ಮುಖೇಶ್‌ ಅಂಬಾನಿ, 132 ಮಂದಿ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಮೂಲಕ “ಶ್ರೀಮಂತ ಭಾರತೀಯ’ ಪಟ್ಟದಲ್ಲಿ ಸ್ಥಿರವಾಗಿದ್ದಾರೆ. ಒಟ್ಟು 175.400 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ ಅಂಬಾನಿ ಅಗ್ರ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ ಸುಮಾರು 101 ಕೋಟಿ ಮೌಲ್ಯದ ಸಂಪತ್ತು ಹೊಂದಿಧಿರುವ ಅಹೂಜಾ ಸಮೂಹಗಳ ಮುಖ್ಯಸ್ಥ ಎಸ್‌.ಪಿ. ಅಹೂಜಾ ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಶ್ರೀಮಂತ ಫಾರ್ಮಾ ಉದ್ಯಮಿ ಖ್ಯಾತಿಯ, ಸನ್‌ ಫಾರ್ಮಾಸುÂಟಿಕಲ್ಸ್‌ ಸಂಸ್ಥಾಪಕ, 60ರ ಹರೆಯದ ದಿಲೀಪ್‌ ಸಾಂ Ì, 99,000 ಕೋಟಿ ಮೌಲ್ಯದ ನಿವ್ವಳ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.  ಉಳಿದಂತೆ ನಿರ್ಮಾಣ ಕ್ಷೇತ್ರದ ದಿಗ್ಗಜ ಪಲ್ಲೋಂಜಿ ಮಿಸಿŒ (82,700 ಕೋಟಿ) ನಾಲ್ಕನೇ ಸ್ಥಾನದಲ್ಲಿದ್ದು, ಕೌಟುಂಬಿಕ ಕಲಹದಿಂದಾಗಿ ಸೈರಿಸ್‌ ಮಿಸಿŒ ಟಾಟಾ ಸನ್ಸ್‌ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರ ಕಂಪನಿಯ ಶೇರುಗಳಲ್ಲಿ ಶೇ.18ರಷ್ಟಯ ಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next