ಗುಜರಾತ್: ಮಹಾಶಿವರಾತ್ರಿಯ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹಾಗೂ ಅವರ ಮಗ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಗುಜರಾತ್ನಲ್ಲಿರುವ ಸೋಮನಾಥ ದೇವಾಯಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅವರನ್ನು ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಪಿ.ಕೆ. ಲಾಹಿರಿ ಹಾಗೂ ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದ್ದಾರೆ.
ಈ ವೇಳೆ ಮುಖೇಶ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪ್ರಾರ್ಥಿಸಿದರು. ಈ ಸಂದರ್ಭ ಸೋಮನಾಥ ದೇವಾಲಯದ ಟ್ರಸ್ಟ್‌ಗೆ 1.51 ಕೋ. ರೂ ದೇಣಿಗೆ ನೀಡಿದ್ದಾರೆ.
ಅಂಬಾನಿ ಕುಟುಂಬ ಅಪಾರವಾದ ದೈವಭಕ್ತಿಯನ್ನು ಹೊಂದಿದ್ದು. ಭಾರತೀಯ ಸಂಪ್ರದಾಯಗಳಿಗೆ ವಿಶೇಷ ಮನ್ನಣೆ ನೀಡುವ ಕುಟುಂಬ ಹಿಂದೂ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಎಂದು ಹೇಳಿದ್ದಾರೆ.
Related Articles
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಕೇಶ್ ಅಂಬಾನಿ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ 1.5 ಕೋ. ರೂ. ದೇಣಿಗೆ ಸಲ್ಲಿಸಿದ್ದರು.