Advertisement

ಬಾಲಿವುಡ್‌ನ‌ಲ್ಲಿ ಮತ್ತೊಂದು ಮಹಾಭಾರತ; ಮುಖೇಶ್ ಅಂಬಾನಿ ನಿರ್ಮಾಣ

06:00 AM Mar 22, 2018 | Team Udayavani |

ಮುಂಬಯಿ: ಇತ್ತೀಚೆಗಷ್ಟೇ, ದುಬಾೖಯಲ್ಲಿ ನೆಲೆಯೂರಿರುವ ಉದ್ಯಮಿ, ಕನ್ನಡಿಗ ಬಿ.ಆರ್‌. ಶೆಟ್ಟಿ, 1,000 ಕೋಟಿ ರೂ. ವೆಚ್ಚದಲ್ಲಿ ಮಹಾಭಾರತ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ, ಈಗ ಉದ್ಯಮಿ ಮುಖೇಶ್‌ ಅಂಬಾನಿ ಸಹ ನಿರ್ಮಾಣದಲ್ಲೂ “ಮಹಾಭಾರತ’ ಚಿತ್ರವೊಂದು ತಯಾರಾಗುವ ಮಾಹಿತಿ ಹೊರಬಿದ್ದಿದೆ. ಇದೂ ಕೂಡ 1,000 ಕೋಟಿ ರೂ. ಬಜೆಟ್‌ನ ಚಿತ್ರವೇ ಆಗಿರಲಿದ್ದು, ಆಮೀರ್‌ ಖಾನ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗಿದೆ. ಅದು ಸುಮಾರು ಐದು ಭಾಗಗಳಲ್ಲಿ ಬೆಳ್ಳಿ ತೆರೆಯ ಮೇಲೆ ಪ್ರದ ರ್ಶನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಸಿನಿ ಜಗತ್ತಿನ ಟ್ರಾಕರ್‌ ಆಗಿರುವ ರಮೇಶ್‌ ಬಾಲಾ, ತನ್ನ ಟ್ವಿಟರ್‌ ಖಾತೆಯ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಆಮೀರ್‌ ಈ ಚಿತ್ರದಲ್ಲಿ ಕೃಷ್ಣ ಅಥವಾ ಅರ್ಜುನನ ಪಾತ್ರ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಅವರು “ಥಗ್ಸ್‌ ಆಫ್ ಹಿಂದೂಸ್ಥಾನ್‌’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಆ ಚಿತ್ರದ ಚಿತ್ರೀಕರಣ ಮುಗಿದ ಅನಂತರ ಮಹಾಭಾರತದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸರಣಿ ರೂಪ ದಲ್ಲಿ ಈ ಸಿನೆಮಾ ತಯಾರಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಟಿ ಫಾತಿಮಾ ಸನಾ ಶೇಖ್‌, ತಾವು “ದ ಮಹಾಭಾರತ’ ಎಂಬ ಪುಸ್ತಕ ಓದುತ್ತಿದ್ದ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದರು. 

ಈ ಚಿತ್ರ ಹಾಲಿವುಡ್‌ನ‌ “ಲಾರ್ಡ್‌ ಆಫ್ ದ ರಿಂಗ್ಸ್‌’ ಅಥವಾ “ಗೇಮ್ಸ್‌ ಆಫ್ ಥ್ರೋನ್ಸ್‌’ ಚಿತ್ರಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿ ಈ ಚಿತ್ರ ತಯಾ ರಾಗಲಿದೆ ಎಂದು ಬಾಲಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next