Advertisement

ಡಾರ್ಲಿಂಗ್‌ ಕೃಷ್ಣ ಹೊಸ ಚಿತ್ರಕ್ಕೆ ಚಾಲನೆ

06:48 AM Jun 19, 2020 | Lakshmi GovindaRaj |

ಕೋವಿಡ್‌ 19 ಲಾಕ್‌ ಡೌನ್‌ ನಡುವೆಯೇ ನಟ ಮದರಂಗಿ ಕೃಷ್ಣ ಅಭಿನಯದ ಹೊಸಚಿತ್ರ ಶ್ರೀಕೃಷ್ಣ ಅಟ್‌ ಜೀಮೇಲ್‌ ಡಾಟ್‌ ಕಾಂ ಚಿತ್ರದ ಮುಹೂರ್ತ ಸರಳವಾಗಿ ಆಗಿದೆ. ಸಂದೇಶ್‌ ನಾಗರಾಜ್‌ ನಿರ್ಮಿಸಿ ಡಾರ್ಲಿಂಗ್‌ ಕೃಷ್ಣ ಅಭಿನಯದ  ಚಿತ್ರ ಜೂನ್‌ 18 ರಂದು ಅರ್ಜುನ್‌ ಜನ್ಯಾ ಅವರ ಸ್ಟುಡಿಯೋದಲ್ಲಿ ಸೆಟ್ಟೇರಿದೆ.

Advertisement

ಈ ಚಿತ್ರಕ್ಕೆ ನಾಗಶೇಖರ್‌ ನಿರ್ದೇಶನವಿದ್ದು, ಕೋವಿಡ್‌ 19 ಭೀತಿಯಿಂದಾಗಿ ಮುಹೂರ್ತ ಕಾರ್ಯಕ್ರಮ ಅತ್ಯಂತ ಸರಳವಾಗಿ ನೆರವೇರಿದೆ ಎಂದು ಪ್ರೊಡಕ್ಷನ್ಸ್‌  ಹೌಸ್‌ ಘೋಷಿಸಿದೆ. ಚಿತ್ರದ ಪ್ರಮುಖ ಕಲಾವಿದರು, ತಂತ್ರಜ್ಞರ ಸಮ್ಮುಖ  ದಲ್ಲಿ ಚಿತ್ರವನ್ನು ಪ್ರಾರಂಭಿಸಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಅವರೊಂದಿಗೆ ನಿರ್ದೇಶಕರು ಹಾಡಿನ ಧ್ವನಿಮುದ್ರಣವನ್ನು ಪ್ರಾರಂಭಿಸಲಿದ್ದಾರೆ.

ಏತನ್ಮಧ್ಯೆ, ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಆಕ್ಷನ್‌ ಕಂ ಲವ್‌ ಎಂಟರ್‌ಟೆ„ನರ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶ್ರೀಕೃಷ್ಣ ಅಟ್‌ ಜೀಮೇಲ್‌ ಡಾಟ್‌ ಕಾಂ  ಚಿತ್ರಕ್ಕೆ ಸತ್ಯ ಹೆಗ್ಡೆ ಛಾಯಾಗ್ರಹಣ, ಅರುಣ್‌ ಸಾಗರ್‌ ಕಲಾ ನಿರ್ದೇಶನ ಚಿತ್ರಕ್ಕಿದೆ. ದೀಪು ಎಸ್‌. ಕುಮಾರ್‌ ಸಂಕಲನ ಮತ್ತು ರವಿವರ್ಮ ಸಾಹಸ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next