Advertisement

ಮುಫ್ತಿಗಿಲ್ಲ ತೃಪ್ತಿ

09:12 PM May 24, 2019 | Lakshmi GovindaRaj |

ಪೀಪಲ್ಸ್‌ ಡೆಮಾಕ್ರೆಟಿಕ್‌ ಪಾರ್ಟಿ ಅಧ್ಯಕ್ಷೆ, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೆಹಬೂಬಾ, ಮತ ಗಳಿಕೆಯಲ್ಲಿ ಮೂರನೆಯವರಾಗಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ನ ಹಸ್ನೆ„ನ್‌ ಮಸೂದಿ ಎದುರು 9800 ಮತಗಳಿಂದ ಪರಾಭವಗೊಂಡಿದ್ದಾರೆ.

Advertisement

2014ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದ ಪಿಡಿಪಿ, ಮುಂದೆ ಎರಡು ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ, ಜೂನ್‌ 2018ರಲ್ಲಿ ಮುರಿದು ಬಿತ್ತು. ಮುಖ್ಯಮಂತ್ರಿಯಾಗಿದ್ದಾಗಲೂ, ಮೆಹಬೂಬ ಅವರಿಗೆ ಅನಂತ್‌ನಾಗ್‌ನಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ.

2016ರಲ್ಲಿ ಐದು ತಿಂಗಳ ಕಾಲ ಕಣಿವೆ ರಾಜ್ಯದಲ್ಲಿ ನಡೆದ ಗಲಾಟೆಗಳು, ಸಾವು-ನೋವು, ಹಿಜ್‌ಬುಲ್‌ ಮುಜಾಹಿದ್ದೀನ್‌ನ ಬುರ್ಹಾನ್‌ ವನಿ ಹತ್ಯೆ ಮುಂತಾದ ಕಾರಣಗಳು ಮೆಹಬೂಬ ಗೆಲುವಿಗೆ ಕಂಟಕಗಳಾಗಿ ಪರಿಣಮಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next