Advertisement

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

01:48 AM Sep 17, 2024 | Team Udayavani |

ಮೂಡುಬಿದಿರೆ: ಕೇಂದ್ರ ಪುರಸ್ಕೃತ ಅಮೃತ್‌ 2.0 ಯೋಜನೆಯಡಿ 77 ಕೋ.ರೂ.ಅಂದಾಜು ವೆಚ್ಚದಲ್ಲಿ ಮೂಡುಬಿದಿರೆಯಲ್ಲಿ ಕಾರ್ಯಗತ ಗೊಳ್ಳಲಿರುವ ಸುಧಾರಿತ ನೀರು ಯೋಜನೆಯ ಕಾಮಗಾರಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್‌ ಸೋಮವಾರ ಜ್ಯೋತಿ ನಗರದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.

Advertisement

ಮೂಡುಬಿದಿರೆಯ ನೀರು ಸರಬರಾಜು ಘಟಕವು ಸುಮಾರು 30 ವರ್ಷಗಳು ಹಳೆಯದಾಗಿದ್ದು, ಕಚ್ಚಾ ನೀರಿನ ಪಂಪುಗಳು, ಏರು ಕೊಳವೆ ಮಾರ್ಗಗಳು ಮತ್ತು ವಿತರಣೆ ಕೊಳವೆ ಮಾರ್ಗಗಳು ಶಿಥಿಲಾವಸ್ಥೆಯಲ್ಲಿವೆ. ಏರುತ್ತಿರುವ ಜನಸಂಖ್ಯೆಗನುಸಾರ ಮುಂದಿನ 30 ವರ್ಷಗಳ ಬೇಡಿಕೆಗೆ ತಕ್ಕುದಾಗಿ 8.9 ಎಂಎಲ್‌ಡಿ ಸಾಮರ್ಥ್ಯದ ಈ ಯೋಜನೆಯನ್ನು ರೂಪಿಸಲಾಗಿದೆ ಐ.ಬಿ.ಆವರಣದ ಒಳಗೆ 2.5 ಲಕ್ಷ ಲೀ. ಪ್ಲಸ್‌, ವಿದ್ಯಾಗಿರಿಯಲ್ಲಿ 7.5 ಲಕ್ಷ.ಲೀ. ಪ್ಲಸ್‌, ಕದಿರಂದ ಗುಡ್ಡದಲ್ಲಿ 5 ಲಕ್ಷ ಲೀ.ಪ್ಲಸ್‌ ಸಾಮರ್ಥ್ಯದ ಜಲಸಂಗ್ರಹಾಗಾರಗಳನ್ನು ನಿರ್ಮಿಸ ಲಾಗುವುದು ಎಂದರು.

ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರು, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ನೀರು ಸರಬರಾಜು ಮಂಡಳಿ ಸಹಾಯಕ ಎಂಜಿನಿಯರ್‌ ಶೋಭಾಲಕ್ಷಿ, ಗುತ್ತಿಗೆದಾರ ಶ್ರೀಕಾಂತ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next