Advertisement
ಶ್ರೀ ಕೃಷ್ಣಾಪುರ ಮಠಾಧೀಶರು ಕೃಷ್ಣಾಪುರ ಮಠದಲ್ಲಿ, ಮಂಗಳೂರು, ಕಾರ್ಕಳ, ಪಾವಂಜೆ ಮೊದಲಾದೆಡೆ ಶ್ರೀ ಬಾಳೆಗಾರು ಮಠಾಧೀಶರು, ಉಜಿರೆ, ಸುಬ್ರಹ್ಮಣ್ಯ ಮೊದಲಾದೆಡೆ ಸುಬ್ರಹ್ಮಣ್ಯ ಮಠಾಧೀಶರು ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ, ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಬೆಂಗಳೂರು, ಮೈಸೂರು, ಚೆನ್ನೈ ಮೊದಲಾದೆಡೆ ಮಠಾಧೀಶರು ವಿವಿಧೆಡೆ ಮುದ್ರಾಧಾರಣೆ ನಡೆಸಿದರು. ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು.
ಉಪ್ಪಿನಂಗಡಿ ಸಮೀಪದ ಎರ್ಕಿಮಠದಲ್ಲಿ ವೆಂಕಟರಮಣ ಉಪಾಧ್ಯಾಯರು ಮುದ್ರಾಧಾರಣೆ ನಡೆಸಿದರು. ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳ ಇದಾಗಿದೆ. ಮಧ್ವಾಚಾರ್ಯರು ಕೊಟ್ಟ ಮುದ್ರಾಧಾರಣೆಯ ಉಪಕರಣ ಶಿಥಿಲವಾದ ಕಾರಣ ಕಳೆದ ವರ್ಷ ಪೇಜಾವರ ಶ್ರೀಗಳ ಪರ್ಯಾಯದಲ್ಲಿ ಹೊಸ ಮುದ್ರೆಗಳನ್ನು ಪಡೆದುಕೊಂಡಿದ್ದರು.