Advertisement
ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆಯಿಂದಾಗಿ ದೇಶದ ವಿದೇಶಾಂಗ ಸಚಿವಾಲಯ ಅಲ್ಲಿ ವಾಸಿಸುತ್ತಿದ್ದ ಭಾರತೀಯರನ್ನು ಮರಳಿ ಕರೆಯಿಸಿಕೊಳ್ಳವಲ್ಲಿ ನಿರತವಾಗಿದೆ. ಭಾರತ ಸರ್ಕಾರದ ಪ್ರಯತ್ನದ ಫಲವಾಗಿ ಕಾಬೂಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಐಟಿಬಿಪಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದ ಕಸಬಾ ಜಂಬಗಿ ಗ್ರಾಮದ ಯೋಧ ಮಂಜುನಾಥ ಮಾಳಿ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ.
Related Articles
Advertisement
೨೦೦೮ರಿಂದ ಐಟಿಬಿಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಅವರು 2019ರಿಂದ ಕಾಬೂಲ್‌ನಲ್ಲಿ ಕಮಾಂಡೋ ಆಗಿ ಕಾರ್ಯನಿರ್ವಹಣೆಗೆ ತೆರಳಿದ್ದರು. ಇನ್ನೆರಡು ತಿಂಗಳಲ್ಲಿ ಅಲ್ಲಿನ ಸೇವೆ ಪೂರ್ಣಗೊಳ್ಳುವುದರೊಳಗೆ ಸದ್ಯದ ಬೆಳವಣಿಗೆಯಿಂದಾಗಿ ತಾಯ್ನಾಡಿಗೆ ಮರಳಿದ್ದಾರೆ.
ಆತಂಕದ ಎರಡು ದಿನ : ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಯಿಂದ ಕಳವಳಗೊಂಡಿದ್ದ ಮಂಜುನಾಥ ಕುಟುಂಬಸ್ಥರು ನಿತ್ಯ ಅವರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ ಆಗಸ್ಟ್ 14 ರ ನಂತರ ಮಂಜುನಾಥ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರಲ್ಲಿ ಆತಂಕದ ಕಾರ್ಮೋಡ ಆವರಿಸಿತ್ತು. ನಿರಂತರ ಪ್ರಯತ್ನದ ನಂತರ ಮಂಜುನಾಥ ಅವರು ಭಾರತಕ್ಕೆ ಬಂದ ಅಂದರೆ ಆಗಸ್ಟ್ 16 ರಂದು ಮಂಜುನಾಥಗೆ ಕರೆ ಮಾಡಿದ ಕುಟುಂಬಸ್ಥರು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಮಂಜುನಾಥನ ಹೆತ್ತವರು, ಮಡದಿ, ಇಬ್ಬರು ಮಕ್ಕಳು ಹಾಗೂ ಸಹೋದರರು ನಿಟ್ಟುಸಿರು ಬಿಟ್ಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕಷ್ಟದಲ್ಲಿರುವ ಭಾರತೀರನ್ನು ಕರೆತರುವಲ್ಲಿ ಭಾರತ ಸರ್ಕಾರ ಕಠಿಬದ್ಧವಾಗಿದೆ. ನನ್ನ ಸಹೋದರ ಮಂಜುನಾಥ ಅವರು ಸೇರಿದಂತೆ ನೂರಾರು ಭಾರತೀರನ್ನು ತಾಯ್ನಾಡಿಗೆ ಮರಳಿ ತರುವಲ್ಲಿ ವಿಶೇಷ ಕಾಳಜಿ ವಹಿಸಿದ ಭಾರತ ಸರ್ಕಾರಕ್ಕೆ ನನ್ನ ಧನ್ಯವಾದಗಳು.–ಸಿದ್ದಲಿಂಗು ಮಾಳಿ ( ಮಂಜುನಾಥ ಮಾಳಿ ಸಹೋದರ)