ಉಳ್ಳಾಲ: ಮಕ್ಕಳು ಸಾಧನೆ ಮಾಡಬೇಕಾದರೆ ಕುತೂಹಲ ಮೂಡಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಸೂರಜ್ ಶಿಕ್ಷಣ ಸಂಸ್ಥೆ ಸೂರಜ್ ಕಲಾಸಿರಿಯ ಮೂಲಕ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೂರಜ್ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಸೂರಜ್ ಕಲಾಸಿರಿ-2018ನ್ನು ಶುಕ್ರವಾರ ಉದ್ಘಾಟಿಸಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ಫೋಸಿಸ್ ಸೇರಿದಂತೆ ಹಲವಾರು ಸಾಧಕರಿಂದಾಗಿ ಪ್ರಪಂಚದಲ್ಲಿ ಭಾರತ ತನ್ನದೇ ಆದ ಸಾಧನೆಯನ್ನು ನಡೆಸುವ ಮೂಲಕ ಇತರರಿಗೆ ಸರಿಸಮಾನರಾಗಿ ತಲೆ ಎತ್ತಿ ನಿಲ್ಲುವ ಕೆಲಸ ಆಗಿದೆ. ಭಾರತೀಯತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯಬೇಕು. ಬದುಕಿಗಾಗಿ ವಿದ್ಯೆ ಇರಬೇಕು. ಶಿಕ್ಷಿತರಾದ ಮಾತ್ರಕ್ಕೆ ವೈದ್ಯ, ಎಂಜಿನಿಯರ್ ಕ್ಷೇತ್ರವನ್ನೇ ಆರಿಸುವುದಲ್ಲ. ಕೃಷಿಯ ಜತೆಗೂ ಬದುಕನ್ನು ರೂಪಿಸುವ ಕಾರ್ಯ ನಡೆಯಬೇಕು. ಉನ್ನತ ಶಿಕ್ಷಣ ಪಡೆದವರು ಕೃಷಿ ಕ್ಷೇತ್ರದಲ್ಲಿ ದುಡಿಯುವ ಮೂಲಕ ಪ್ರೇರಣೆಯಾಗಬೇಕು ಎಂದರು.
ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ ಭಟ್, ಶ್ರೀ ಕ್ಷೇತ್ರ ಕಟೀಲಿನ ವಾಸುದೇವ ಆಸ್ರಣ್ಣ ಹಾಗೂ ಡಾ| ಅಣ್ಣಯ್ಯ ಕುಲಾಲ್ ಅವರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್. ರೇವಣRರ್ ಹಾಗೂ ಹೇಮಲತಾ ಎಂ. ರೇವಣRರ್ ರೋಟರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಹಿಂದೆ ಪ್ರದಾನಿಸಲಾದ ರೋಟೇರಿಯನ್ ಪಿಎಚ್‌ಎಫ್‌ನ್ನು ಹೆಗ್ಗಡೆ ಅವರು ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.
ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್, ಮುಡಿಪು ಸಂತ ಜೋಸೆಫ್ ವಾಜ್‌ನ ಧರ್ಮಗುರು ಬೆಂಜಮಿನ್ ಪಿಂಟೊ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಇನ್ಫೋಸಿಸ್‌ನ ಎಚ್‌ಆರ್ ಅಧಿಕಾರಿ ವಾಸುದೇವ ಕಾಮತ್, ಶಿಕ್ಷಣ ಸಂಸ್ಥೆಯ ಹೇಮಲತಾ ಎಂ. ರೇವಣRರ್, ಸೂರಜ್ ಎಂ. ರೇವಣRರ್ ಹಾಗೂ ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್. ರೇವಣRರ್ ಸ್ವಾಗತಿಸಿದರು. ನಿತೀಶ್ ಶೆಟ್ಟಿ ಕಾರ್ಯಕ್ರಮ ನಿರೂ ಪಿಸಿದರು. ಸೂರಜ್ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಮಲಾ ಶೆಟ್ಟಿ ವಂದಿಸಿದರು. ಈ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು.