Advertisement
ಶುಕ್ರವಾರ ಪಟ್ಟಣದ ಜೇಸಿ ಭವನದಲ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಸಿದ್ಧಾರ್ಥ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಕರ್ನಾಟಕ ಬೆಳೆಗಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಕಾಫಿ ಉದ್ಯಮದ ಹರಿಕಾರ, ಸಮಾಜ ಸೇವಕ ಸಿದ್ಧಾರ್ಥ ಅವರು, ತಾನು ಕಂಡಂತಹ ಅತ್ಯುತ್ತಮ ಉದ್ಯಮಿಯಾಗಿ ರೂಪುಗೊಂಡವರು. ಅವರ ಸರಳತೆ ಕಾಫಿ ನಾಡಿಗೆ ಮಾದರಿಯಾಗಿದೆ. ಸಿದ್ಧಾರ್ಥ ಅವರ ಅಕಾಲಿಕ ಸಾವು ಜಿಲ್ಲೆಯ ಜನತೆಗೆ ಬಹುದೊಡ್ಡ ನಷ್ಟವುಂಟು ಮಾಡಿದೆ. ಪ್ರತಿ ಕ್ಷಣವೂ ಕಾಫಿ ನಾಡಿಗೆ ಮೋಡ ಕವಿದ ವಾತಾವರಣ ಉಂಟಾಗುತ್ತಿದೆ. ಅವರ ಅಗಲಿಕೆಯಿಂದ ಕಾಫಿ ಉದ್ಯಮ ಬಡವಾಗಿದೆ. ಸಿದ್ಧಾರ್ಥ ಅವರ ನೆನಪಿಗಾಗಿ ಪಟ್ಟಣದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಅವರ ಅಸಹಜ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನ್ಯಾಯಾಲಯದ ಮೊರೆ ಹೋಗಲು ಬೆಳೆಗಾರರ ಸಂಘ ನಿರ್ಧರಿಸಿದೆ ಎಂದು ತಿಳಿಸಿದರು.
ಕಾಫಿ ಬೆಳೆಗಾರ ಬಿ.ಎ.ಜಗನ್ನಾಥ್ ಮಾತನಾಡಿ, ಒಬ್ಬ ಉದ್ಯಮಿ ಪ್ರಪಂಚದಾದ್ಯಂತ ಹೆಸರು ಮಾಡಲು ಅವರ ಶ್ರಮದೊಂದಿಗೆ ಅಪಾರವಾದ ದೈವೀ ಶಕ್ತಿಯೂ ಇರಬೇಕು. ಅಂತಹ ಶಕ್ತಿ ಸಿದ್ಧಾರ್ಥರಲ್ಲಿತ್ತು. ಕಾಫಿ ಉದ್ಯಮ ಭಾರತದಲ್ಲೂ ಉತ್ತಮವಾಗಿದೆ ಎಂದು ಪ್ರಪಂಚಕ್ಕೆ ತಿಳಿಸಿದ ನೇತಾರ. ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಟಿಯಿಂದ ಕಾಫಿ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟ ವ್ಯಕ್ತಿ ಇನ್ನಿಲ್ಲ ಎಂಬುದೇ ನಮ್ಮ ದುರಂತ ಎಂದರು.
ಪ್ರಾರಂಭದಲ್ಲಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಸಿದ್ಧಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಾಲಕೃಷ್ಣಗೌಡ, ಸುರೇಂದ್ರ, ದುಂಡುಗ ಪ್ರಮೋದ್, ಡಿ.ಆರ್.ದುಗ್ಗಪ್ಪಗೌಡ, ಅಶೋಕ್ ಶೆಟ್ಟಿ, ಚಂದ್ರೇಶ್, ಡಿ.ಕೆ.ಲಕ್ಷ ್ಮಣ್‌ಗೌಡ, ಮುಗ್ರಹಳ್ಳಿ ಪ್ರದೀಪ,ಬಿ.ಎಂ.ಬೈರೇಗೌಡ, ಎಂ.ಎಸ್.ಅನಂತ್, ಅರೆಕುಡಿಗೆ ಶಿವಣ್ಣ, ಎಚ್.ಕೆ.ಯೋಗೇಶ್, ಸುದರ್ಶನ್ ಮತ್ತಿತರರಿದ್ದರು.