ಮೂಡಿಗೆರೆ: ಕಾಂಗ್ರೆಸ್ ಸರ್ಕಾರದಅವ ಧಿಯಲ್ಲಿ ಜಾರಿಗೆ ತಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಿಂದ ಬಡ ಜನರಿಗೆ ಉದ್ಯೋಗಸಿಗಲು ಸಾಧ್ಯವಾ ಗಿದೆ. ಈ ಯೋಜನೆಕಾಂಗ್ರೆಸ್ ಸರ್ಕಾರ ಜಾರಿಗೆ ತರದಿದ್ದಲ್ಲಿಗ್ರಾಪಂಗಳು ಬಾಗಿಲು ಮುಚ್ಚುವ ಪರಿಸ್ಥಿತಿನಿರ್ಮಾಣವಾಗುತ್ತಿತ್ತು ಎಂದು ಕಾಂಗ್ರೆಸ್‌ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮಹೇಳಿದರು.
ಭಾನುವಾರ ಪಟ್ಟಣದಲ್ಲಿ ವಿಧಾನಪರಿಷತ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿಪಾಲ್ಗೊಂಡು ಅವರು ಮಾತನಾಡಿದರು.ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಜನವಿರೋಧಿ ಆಡಳಿತ ನೀಡುತ್ತಿದೆ. ಜನರಬದುಕನ್ನು ಸಂಕಷ್ಟಕ್ಕೆ ದೂಡಿವೆ. ಬಿಜೆಪಿಸರ್ಕಾರ ಕಾರ್ಪೋರೆಟ್ ಕಂಪೆನಿಗಳ ಪರವಾಗಿವೆ.
ಬಡವರು, ರೈತರು,ಕಾರ್ಮಿಕರು ಸೇರಿದಂತೆ ದಲಿತರು,ಮಹಿಳೆಯರು, ಅಲ್ಪಸಂಖ್ಯಾತರು,ಹಿಂದುಳಿದ ವರ್ಗಗಳ ವಿರೋ ಧಿಯಾಗಿದೆಎಂದು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರ 7ವರ್ಷದ ಆಡಳಿತದಲ್ಲಿ ದೇಶದ ಆರ್ಥಿಕ,ಸಾಮಾಜಿಕ, ರಾಜಕೀಯ ವ್ಯವಸ್ಥೆಹದಗೆಟ್ಟಿದ್ದು ಕಾಂಗ್ರೆಸ್ ಸರ್ಕಾರ 70ವರ್ಷದಲ್ಲಿ ದೇಶಕ್ಕಾಗಿ ಏನು ಮಾಡಿದೆಎಂದು ಪ್ರಶ್ನಿಸುತ್ತಿದ್ದಾರೆ.
ಬಿಜೆಪಿ ಜನರ ದಿಕ್ಕುತಪ್ಪಿಸುತ್ತಿದೆ ಎಂದರು.ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಭಾಪತಿಬಿ.ಎಲ್. ಶಂಕರ್ ಮಾತನಾಡಿ, ಬಿಜೆಪಿಸರ್ಕಾರ ಪರ್ಸಂಟೇಜ್ ಸರ್ಕಾರವಾಗಿದೆ.ಇಂತಹ ಭ್ರಷ್ಟಾಚಾರಿಗಳ ಸರ್ಕಾರವನ್ನುಅಧಿ ಕಾರದಿಂದ ಕಿತ್ತೂಗೆಯದಿದ್ದಲ್ಲಿ ಜನರತೆರಿಗೆ ಹಣ ಅ ಧಿಕಾರಿಗಳು, ಶಾಸಕರು,ಮಂತ್ರಿಗಳ ಪಾಲಾಗಲಿದೆ. ಸ್ಥಳೀಯಸಂಸ್ಥೆಗಳ ಜನಪ್ರತಿನಿ ಧಿಗಳು ಎಚ್ಚೆತ್ತುಕೊಂಡುಬಿಜೆಪಿ ಸರ್ಕಾರವನ್ನು ತೊಲಗಿಸಲುಮುಂದಾಗಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಕೆ.ಪಿ.ಅಂಶುಮಂತ್, ಅಭ್ಯರ್ಥಿ ಗಾಯತ್ರಿಶಾಂತೇಗೌಡ, ಶಾಸಕ ಟಿ.ಡಿ. ರಾಜೇಗೌಡ,ತರೀಕೆರೆ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಮಾಜಿ ಶಾಸಕ ಶಿವಶಂಕರ್,ಡಾ| ವಿಜಯಕುಮಾರ್, ಕೆ. ಮಹಮದ್,ಎಂ.ಎಲ್. ಮೂರ್ತಿ ಎ.ಎನ್. ಮಹೇಶ್‌ಇತರರು ಇದ್ದರು.