Advertisement

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

01:48 PM Sep 23, 2024 | Team Udayavani |

ಮುಧೋಳ : ಅತ್ಯಾಚಾರದಂತಹ ಹೇಯ ಕೃತ್ಯದಲ್ಲಿ ಯಾವುದೇ ಧರ್ಮದವರು ಭಾಗಿಯಾದರೂ ದೊಡ್ಡ ಅಪರಾಧ. ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಸಿಬೇಕು ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ನಗರದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಅಲ್ಪಸಂಖ್ಯಾತ ಸೌಹಾರ್ದ ಸಂಘಟನೆಗಳ ಒಕ್ಕೂಟದ‌ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ‌ ಪಾಲ್ಗೊಂಡು ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅತ್ಯಾಚಾರದಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕೆಲವು ಕೋಮುವಾದ ಸಂಘಟನೆಗಳು ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡಲು ಮುಂದಾಗುತ್ತಿವೆ. ಇದರಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತದೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಲಿ. ಆದರೆ ಇಂತಹ ಘಟನೆಗಳನ್ನು‌‌ ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ಕೋಮುವಾದಿ ಸಂಘಟನೆಗಳು ಇಂತಹ ಪ್ರಕರಣಗಳನ್ನು ಕೇವಲ ಒಂದು ಕೋಮುವಾದಿಗೆ ಮೀಸಲಾಗಿಸಬಾರದು. ಎಲ್ಲ ವರ್ಗದ ಹೆಣ್ಣುಮಕ್ಕಳಿಗೆ ಅನ್ಯಾಯವಾದಾಗ ಪ್ರತಿಯೊಂದು ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕು. ಇತ್ತೀಚೆಗೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸದೆ, ಇದೀಗ ಎರಡು ಕೋಮುಗಳ ನಡುವೆ ನಡೆದಿರುವ ಪ್ರಕಣವನ್ನು ಖಂಡಿಸಲು ಮುಂದಾಗಿರುವುದು ಕೋಮುವಾದ ಸಂಘಟನೆ ಇಬ್ಬಗೆ ನೀತಿ ತೋರಿಸುತ್ತದೆ‌ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರನ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳದೆ. ಹೇಳಿಕೆ ನೀಡಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿರುವವರ ವಿರುದ್ದ ಪ್ರಕರಣ ದಾಖಲಿಸಿರುವ ಪೊಲೀಸ್ ಇಲಾಖೆ ನಡೆ ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು‌. ನಗತದಲ್ಲಿ ನಾವೆಲ್ಲರೂ ಸಹೋದರತೆಯಿಂದ ಬದುಕುವ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ಹೊರಗಿನ ಪ್ರದೇಶದವರನ್ನು ಕರೆತಂದು ನಗರದ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಸಂಗಗಳಿಗೆ ಪೊಲೀಸ್ ಇಲಾಖೆ‌ ಮುಂದಿನ ದಿನದಲ್ಲಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

Advertisement

ಕೆಪಿಸಿಸಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಶಫಿಕ್ ಬೇಪಾರಿ ಮಾತಾಡಿ, ಹೆಣ್ಣುಮಕ್ಕಳು ಮೇಲೆ ಯಾವುದೇ ಧರ್ಮದ ದುರುಳರು ಅನ್ಯಾಯವೆಸಗಿದಾಗ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅತ್ಯಾಚಾರದಂತಹ ಪ್ರಕರಣದಲ್ಲಿ ಪಾಲ್ಗೊಳ್ಳುವ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು‌ ಎಂದು ಒತ್ತಾಯಿಸಿದರು.

ಸಿಮ್ರಿನ್ ಬಿಸ್ತಿ ಮಾತನಾಡಿ, ಜಾತಿ ಮತ ಪಂಥಗಳ ಭೇದ ಭಾವ ಮಾಡದೆ ಅತ್ಯಾಚಾರದಲ್ಲಿ ತೊಡಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ನ್ಯಾಯ ಒದಗಿಸಲು ನಾವು ನಿರಂತರ ಶ್ರಮಿಸುತ್ತೇವೆ. ಅತ್ಯಾಚರಕ್ಕೆ ಕೋಮುಬಣ್ಣ ಬಳಿಯದೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು‌. ಇದಕ್ಕೂ ಮುನ್ನ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ‌ ಮೂಲಕ‌ ಆಗಮಿಸಿ‌ದರು. ಮಲ್ಲಿಕ‌ ಗೋರಿ, ಜಾವೀದ ಹವಾಲ್ದಾರ್, ಅಲ್ಲಾಭಕ್ಷ ಮಾವುತ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

Advertisement

Udayavani is now on Telegram. Click here to join our channel and stay updated with the latest news.

Next