Advertisement

ಮಾಸಾಶನ ನೀಡಲು ಮನವಿ

04:36 PM May 01, 2020 | Naveen |

ಮುದಗಲ್ಲ: ಪಟ್ಟಣದ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಅಂಗವಿಕಲರ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಸಮರ್ಪಕವಾಗಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಅಂಚೆ ಕಚೇರಿ ಅಧೀಕ್ಷಕರಿಗೆ ಬರೆಯಲಾದ ಮನವಿ ಪತ್ರದಲ್ಲಿ ಕರವೇ ಆಗ್ರಹಿಸಿದೆ.

Advertisement

ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು ಹದಿಮೂರು ಸಾವಿರ ಫಲಾನುಭವಿಗಳಿದ್ದಾರೆ. 4-5 ತಿಂಗಳಿಂದ ವೇತನ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ರಾಯಚೂರು ಅಂಚೆ ವಿಭಾಗ ಕಚೇರಿ ಅಧೀಕ್ಷಕರು ಆದಷ್ಟು ಬೇಗ ಫಲಾನುಭವಿಗಳಿಗೆ ತಿಂಗಳ ವೇತನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಪಟ್ಟಣದ ಉಪ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್‌ ಘಟಕದ ಅಧ್ಯಕ್ಷ ಎಸ್‌. ಎ. ನಯೀಮ್‌, ಮಹಾಂತೇಶ ಮತ್ತು ನಾಗರಾಜ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next