Advertisement
2016-17ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಡಿ ಒಟ್ಟು 16 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರ
ನಿರುಪಯುಕ್ತವಾಗಿದೆ. ಗ್ರಾಪಂ ಕೇಂದ್ರ ಸ್ಥಾನದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸಿ ಆ ಮೂಲಕ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ಮತ್ತು ಸರ್ಕಾರದ ಯೋಜನೆಯ ಸೇವೆ ಕಲ್ಪಿಸಬೇಕು ಎಂಬುದು ಯೋಜನೆ ಮೂಲ ಉದ್ದೇಶವಾಗಿದೆ. ಆದರೆ ಗ್ರಾಪಂ ಅ ಧಿಕಾರಿಗಳು ಗ್ರಾಪಂ ಕೇಂದ್ರದಿಂದ 1 ಕಿಮೀ ಅಂತರದಲ್ಲಿ ಜನವಸತಿ ಇಲ್ಲದ ಗ್ರಾಮದ ಹೊರವಲಯದಲ್ಲಿ
ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ. ಅಲ್ಲದೆ 16ಲಕ್ಷ ರೂ. ವೆಚ್ಚ ಮಾಡಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಬಾಗಿಲು, ಕಿಟಕಿ ಜೋಡಿಸಿಲ್ಲ.
ಕಟ್ಟಡದ ಸುತ್ತ ಜಾಲಿ ಗಿಡಗಳು ಬೆಳೆದು ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕಟ್ಟಡ ನಿರುಪಯುಕ್ತವಾಗಿದೆ. ಮೇಲಾಧಿಕಾರಿ ಗಳು ಗಮನ ಹರಿಸಿ ರಾಜೀವಗಾಂಧಿ ಸೇವಾ ಕೇಂದ್ರ ಜನಸೇವೆಗೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿ 16 ಲಕ್ಷ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲಾಗಿದೆ. ಗ್ರಾಪಂ ಕಾರ್ಯಾಲಯದಿಂದ 1 ಕಿ.ಮೀ. ಅಂತರದಲ್ಲಿ ಸೇವಾ ಕೇಂದ್ರವಿದೆ. ಕೇಂದ್ರದ ಸುತ್ತಲೂ ಜಾಲಿಗಿಡ ಬೆಳೆದು ಅಕ್ರಮ ಚಟುವಟಿಕೆ ತಾಣವಾಗಿದೆ. ಅಧಿಕಾರಿಗಳು ಗಮನ ಹರಿಸಿ ಸೇವಾ ಕೇಂದ್ರ ಆರಂಬಿಸಬೇಕು.
ಬಸವರಾಜ ಮರಳಿ, ಗ್ರಾಮಸ್ಥ
Related Articles
ಈಶ್ವರಪ್ಪ
ಪಿಡಿಒ ಹೂನೂರು
Advertisement
ದೇವಪ್ಪ ರಾಠೋಡ