ಢಾಕಾ: ಬಾಂಗ್ಲಾದೇಶದಲ್ಲಿ ಇತ್ತೀಚಿನ ಭಾರೀ ಪ್ರತಿಭಟನೆಗಳು ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ, ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಕೊಲೆ ಆರೋಪಿಗಳಲ್ಲಿ ಒಬ್ಬ ಎಂದು ಹೆಸರಿಸಲಾಗಿದೆ.
ESPNcricinfo ಪ್ರಕಾರ, ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತದಲ್ಲಿ ಮಾಜಿ ಶಾಸಕರಾಗಿದ್ದ ಬಾಂಗ್ಲಾದೇಶ ತಂಡದ ಮಾಜಿ ನಾಯಕ ಮತ್ತು 147 ಮಂದಿಯ ವಿರುದ್ಧ ಆಗಸ್ಟ್ ಆರಂಭದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಕೊಲೆ ಆರೋಪವನ್ನು ದಾಖಲಿಸಲಾಗಿದೆ.
ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಬಳಿಕ, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಬಾಂಗ್ಲಾದೇಶದ ಮಧ್ಯಾಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಢಾಕಾದ ಅಡಬೋರ್ ಪೊಲೀಸ್ ಠಾಣೆಯಲ್ಲಿ ರಫೀಕುಲ್ ಇಸ್ಲಾಂ ಎಂಬವರು ಕೊಲೆ ಪ್ರಕರಣವನ್ನು ದಾಖಲಿಸಿದ್ದು, ಶಕಿಬ್, ಶೇಖ್ ಹಸೀನಾ ಮತ್ತು ಪಕ್ಷದ ಅನೇಕ ಮಾಜಿ ಮಂತ್ರಿಗಳು ಮತ್ತು ಶಾಸಕರು ಆರೋಪಿಗಳ ಪಟ್ಟಿಯಲ್ಲಿದ್ದಾರೆ.
ಎಫ್‌ಐಆರ್ ನಲ್ಲಿ 27 ಅಥವಾ 28ನೇ ಆರೋಪಿಯಾಗಿರುವ ಶಕೀಬ್, ಆಗಸ್ಟ್ 5 ರಂದು ಅಥವಾ ಪ್ರತಿಭಟನೆಯ ಸಮಯದಲ್ಲಿ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಇರಲಿಲ್ಲ.