Advertisement

‘ಮುದ್ದು ನೀನು’ ಎಂದು ರೊಮ್ಯಾನ್ಸ್ ಮಾಡಿದ ರಚ್ಚು-ಅಜಯ್

01:04 PM Nov 09, 2021 | Team Udayavani |

ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಸಿನಿಮಾ ಸಖತ್ ಸುದ್ದಿಯಲ್ಲಿದೆ. ಅಜಯ್ ರಾವ್ ಮತ್ತು ಡಿಂಪಲ್ ಕ್ವೀನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾದ ಹಾಡುಗಳು ಕೇಳುಗನಿಗೆ ಖುಷಿ ನೀಡಿವೆ. ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ.

Advertisement

ಹೌದು ಲವ್ ಯು ರಚ್ಚು ಚಿತ್ರದ ‘ಮುದ್ದು ನೀನು’ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಅಜಯ್ ಮತ್ತು ರಚಿತಾ ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ರಚಿತಾ ರಾಮ್ ಸ್ಮೈಲ್ ಮತ್ತು ಹಾಟ್ ಲುಕ್ ಪಡ್ಡೆ ಹುಡುಗರ ಎದೆ ಬಡಿತ ಜೋರು ಮಾಡಿದೆ.

ಲವ್ ಯು ರಚ್ಚು ಚಿತ್ರಕ್ಕೆ ಶಂಕರ್ ಎಸ್ ರಾಜ್ ಆಕ್ಷನ್ ಕಟ್ ಹೇಳಿದ್ದು, ಗುರುದೇಶ್ ಪಾಂಡೆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಮುದ್ದು ನೀನು ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದು, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಸಿದ್ ಶ್ರೀರಾಮ್ ಹಾಡಿದ್ದು ಹಾಡಿನ ಪವರ್ ಮತ್ತಷ್ಟು ಹೆಚ್ಚಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next