Advertisement

ಮುದ್ದು ಮೂಡುಬೆಳ್ಳೆ ಅವರ ತುಳು ನಾಟಕ ಪರಂಪರೆ ಕೃತಿ ಬಿಡುಗಡೆ ಕಾರ್ಯಕ್ರಮ

02:17 PM May 08, 2019 | Vishnu Das |

ಮುಂಬಯಿ: ತುಳು ರಂಗಭೂಮಿ ಕ್ಷೇತ್ರಕ್ಕೆ ಮುದ್ದು ಮೂಡುಬೆಳ್ಳೆಯವರ ತುಳು ನಾಟಕ ಪರಂಪರೆ ಕೃತಿಯು ಒಂದು ಆಚಾರ್ಯ ಕೃತಿಯಾಗಿದೆ ಎಂದು ವಿಶ್ರಾಂತ ಕುಲಪತಿ ಡಾ| ಬಿ. ಎ. ವಿವೇಕ್‌ ರೈ ಅಭಿಪ್ರಾಯಪಟ್ಟರು.

Advertisement

ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ ಬಿಡುಗಡೆಯ ನೇರಪ್ರಸಾರದಲ್ಲಿ ಮೇ 4ರಂದು ಕೃತಿ ಅನಾವರಣಗೊಳಿಸಿ ಮಾತನಾಡಿದ ಅವರು, ಒಂದು ಶತಮಾನದ ರಂಗಭೂಮಿ ಇತಹಾಸವನ್ನು ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಮತ್ತು ಅಜ್ಞಾತ ಕಲಾವಿದರ, ನಿರ್ದೇಶಕರ, ಪ್ರಸಾದನ ಕಲೆಯ ಪ್ರತಿಭಾವಂತರ ಕುರಿತಾಗಿ ಮಾಹಿತಿ ನೀಡುವ ಅಪೂರ್ವ ಗ್ರಂಥ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿಯನ್ನು ವಿಮರ್ಶೆ ಮಾಡಿದ ರಘು ಇಡಿRದು ಅವರು ಮುದ್ದು ಮೂಡುಬೆಳ್ಳೆಯವರ ಅಧ್ಯಯನದಿಂದ ಮೂಡಿಬಂದ ವಿಶಿಷ್ಟ ಕೃತಿ ನಾಟಕ ಪರಂಪರೆಯ ದೊಡ್ಡ ಕೋಶ ಎಂದರು. ಸಿನಿಮಾ ರಂಗಭೂಮಿ ನಿರ್ದೇಶಕ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ರಂಗಭೂಮಿಯ ರೋಹಿದಾಸ್‌ ಕದ್ರಿ, ಸರೋಜಿನಿ ಶೆಟ್ಟಿ, ವಿ. ಜಿ. ಪಾಲ್‌, ಮಂಬಯಿ ರಂಗಭೂಮಿಯ ಸಾಧಕ, ಕವಿ ಸಾ. ದಯಾ, ಆಕೃತಿ ಆಶಯ ಪ್ರಕಾಶನದ ನಾಗೇಶ್‌ ಕಲ್ಲೂರ್‌ ಕೃತಿಕಾರ ಮುದ್ದು ಮೂಡುಬೆಳ್ಳೆ ಅವರು ಮಾತನಾಡಿದರು.

ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಅವರು ಸ್ವಾಗತಿಸಿದರು. ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ಅವರು ಕಾರ್ಯಕ್ರಮ ನಿರ್ವಹಿಸಿದರು. ಮನೋಹರ್‌ ಕದ್ರಿ, ಸುಲೋಚನಾ ನವೀನ್‌, ರೇವತಿ ಪ್ರವೀಣ್‌, ಮೋಹನದಾಸ್‌ ಮರೋಳಿ, ಚಂದ್ರಶೇಖರ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next