Advertisement

ತವರಿಗೆ ಮರಳಿದ ಗುಳೆ ಹೋದ ಕಾರ್ಮಿಕರು

12:10 PM Apr 29, 2020 | Naveen |

ಮುದ್ದೇಬಿಹಾಳ: ಮಂಗಳೂರಿನ ವಿವಿಧ ಭಾಗಗಳಿಗೆ ದುಡಿಯಲು ಹೋಗಿ ಲಾಕ್‌ ಡೌನ್‌ದಿಂದ ಅಲ್ಲಿಯೇ ಸಿಕ್ಕಿಕೊಂಡಿದ್ದ ತಾಲೂಕಿನ ವಿವಿಧ ಹಳ್ಳಿಗಳ 42 ಜನ ಕೂಲಿ ಕಾರ್ಮಿಕರು ಅಲ್ಲಿನ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಬಸ್‌ನಲ್ಲಿ ಮಂಗಳವಾರ ಸಂಜೆ ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಂದಿಳಿದರು.

Advertisement

ಪಟ್ಟಣದ ಬಸ್‌ ನಿಲ್ದಾಣಕ್ಕೆ ಬಂದಿಳಿದ 42 ಜನ ಕೂಲಿಕಾರ್ಮಿಕರನ್ನು ಆರೋಗ್ಯಾಧಿಕಾರಿಗಳ ತಂಡ ಸ್ವಾಗತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಆರೋಗ್ಯ ತಪಾಸಣೆ ನಡೆಸಿತು. ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ತಾಂಡಾ, ಅಡವಿ ಹುಲಗಬಾಳ, ನೆರಬೆಂಚಿ, ಶಿವಪುರ, ಘಾಳಪೂಜಿ, ಡೊಂಕಮಡು, ಕಿಲಾರಹಟ್ಟಿ, ಮಾವಿನಭಾವಿ, ಅಡವಿ ಸೋಮನಾಳ ಗ್ರಾಮಗಳ ಜನರ ಪಟ್ಟಿ ಮಾಡಿಕೊಂಡ ಆರೋಗ್ಯ ಇಲಾಖೆಯ ಎಂಎಲ್‌ಎಚ್‌ ಪಿಗಳಾದ ಶಶಿ ಜೋಸೆಫ್‌, ಶ್ರೀಕಾಂತ ಆದಿ ಅವರು ಸ್ವಗ್ರಾಮಕ್ಕೆ ತೆರಳಿದ ಮೇಲೆ ಮೇಲೆ 28 ದಿನಗಳ ಕಾಲ ಹೋಮ್‌ ಕ್ವಾರೆಂಟೈನ್‌ ನಲ್ಲೇ ಇರಬೇಕೆಂದು ಕಾರ್ಮಿಕರಿಗೆ ಸೂಚಿಸಿದರು.

ಕೆಲ ತಿಂಗಳ ಹಿಂದೆ ಕೂಲಿ ಮಾಡಲು ಮಂಗಳೂರಿನ ವಿವಿಧ ಭಾಗಗಳಿಗೆ ಗುಳೇ ಹೋಗಿದ್ದ ಈ ಜನರು ಲಾಕ್‌ಡೌನ್‌ ನಿಂದಾಗಿ ಕೆಲಸ ಇಲ್ಲದೆ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದರು. ಇವರ ಕಷ್ಟ ಆಲಿಸಿದ ಅಲ್ಲಿನ ಜಿಲ್ಲಾಡಳಿತ ಇವರಿಗೆ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಖಾಸಗಿ ಬಸ್‌ಗಳ ಮೂಲಕ ಅವರವರ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ತಹಶೀಲ್ದಾರ್‌ ಜಿ.ಎಸ್‌.ಮಳಗಿ, ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾ ಧಿಕಾರಿ ಗೋಪಾಲ ಕಾಸೆ, ಕೋವಿಡ್‌-19 ನಗರ ತಂಡದ ಮೇಲ್ವಿಚಾರಕ ಎಂ.ಎಸ್‌.ಗೌಡರ, ಆರೋಗ್ಯ ಸಹಾಯಕ ಎಸ್‌. ಆರ್‌.ಸಜ್ಜನ, ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ, ಪುರಸಭೆ ಸಿಬ್ಬಂದಿ ರಮೇಶ ಮಾಡಬಾಳ, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next