Advertisement

ಸೇವೆಗೆ ಸೇರಿದ 3 ತಿಂಗಳಲ್ಲೇ ಮುದ್ದೇಬಿಹಾಳದ ಯೋಧ ಆತ್ಮಹತ್ಯೆ

08:09 PM Dec 05, 2021 | Team Udayavani |

ಮುದ್ದೇಬಿಹಾಳ: ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಜಟ್ಟಗಿ ಗ್ರಾಮದ ಯುವ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ (21) ದೇಶದ ರಾಜಧಾನಿ ದೆಹಲಿಯ ಮಿರಟ್ ಬಳಿ ಇರುವ ಎಂಇಜಿ ಯೂನಿಟ್-9ರ ಭಾರತೀಯ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ರವಿವಾರ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

Advertisement

ಸೇನಾ ಅಧಿಕಾರಿಗಳು ಈ ವಿಷಯವನ್ನು ಇಲ್ಲಿನ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಆ ಮೂಲಕ ಅವರ ಕುಟುಂಬ ವರ್ಗಕ್ಕೆ ಮಾಹಿತಿ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ.

ಮೃತ ಯೋಧನಿಗೆ ತಂದೆ, ತಾಯಿ, ಇಬ್ಬರು ಸಹೋದರ, ಸಹೋದರಿಯರು ಸೇರಿ ಅಪಾರ ಬಂಧು ಬಳಗವಿದ್ದು, ದಿಢಿರ್ ಬಂದೆರಗಿದ ಶೋಕ ಸಂದೇಶದಿಂದ ಮೃತ ಯೋಧನ ಕುಟುಂಬದಲ್ಲಿ, ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದೆ.

ಅವಿವಾಹಿತನಾಗಿದ್ದ ಮಂಜುನಾಥ 7-8 ತಿಂಗಳ ಹಿಂದೆ ಸೇನೆಗೆ ಆಯ್ಕೆಯಾಗಿ ಕೆಲ ತಿಂಗಳು ತರಬೇತಿ ಪಡೆದ ನಂತರ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಎಂಇಜಿ ಯುನಿಟ್-9ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ.

ಆತನ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆ ಹಿನ್ನೆಲೆ ಮಂಜೂನಾಥದ ಸಂಬಂಧಿ ಲಕ್ಕಪ್ಪ ಬೊಮ್ಮಣಗಿ ಮಾತನಾಡಿ, ಸ್ನೇಹಿತ ಕುಮಾರ ಅವರು, ಮಂಜುನಾಥ ಕರ್ತವ್ಯದ ಮೇಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನೂವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸಣ್ಣ ವಯಸ್ಸಲ್ಲೇ ಸೇನೆಗೆ ಸೇರಿದ್ದ ಮಂಜುನಾಥಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಂಕಷ್ಟ ಏನಿತ್ತೋ ದೇವರೇ ಬಲ್ಲ. ಪಾರ್ಥೀವ ಶರೀರದ ಜೊತೆ ಬರುವ ಸೈನಿಕರಿಂದಲೇ ಸ್ಪಷ್ಟ ಮಾಹಿತಿ ದೊರಕಬಹುದು ಎಂದು ತಿಳಿಸಿದರು.

Advertisement

ದೆಹಲಿಯ ಸೇನಾ ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಮಂಗಳವಾರ ಅಥವಾ ಬುಧವಾರ ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next