Advertisement
ಇಲ್ಲಿನ ದಾಸೋಹ ನಿಲಯದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳು, ಸರ್ಕಲ್, ಪಿಡಿಒ, ಗ್ರಾಮಲೆಕ್ಕಿಗರ ಸಭೆಯಲ್ಲಿ ಅವರು ಮಾತನಾಡಿದರು. ಗುಳೇ ಹೋದ ಕಾರ್ಮಿಕರ ಪ್ರತಿಯೊಬ್ಬರ ಹೆಸರು, ಮೊಬೈಲ್ ಸಂಖ್ಯೆ, ಅವರು ವಾಸವಿರುವ ಸ್ಥಳ, ಸಮೀಪದ ಬಸ್ ನಿಲ್ದಾಣ ಅಥವಾ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಮಾಹಿತಿ ಪಡೆದುಕೊಂಡು ಶನಿವಾರ ಬೆಳಿಗ್ಗೆ 10 ಗಂಟೆಯೊಳಗೆ mailto:mlamuddebihal@gmail.com ಇ-ಮೇಲ್ ವಿಳಾಸಕ್ಕೆ ಕಳಿಸಬೇಕು. ಒಂದೆರಡು ದಿನದಲ್ಲಿ ಹೆಲ್ಪ್ಲೈನ್ ಪ್ರಾರಂಭಿಸಿ ಎಲ್ಲರನ್ನೂ ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಲಾಕ್‌ಡೌನ್ ದಿನದಿಂದ ಈವರೆಗೆ ಅವರು ಇದ್ದಲ್ಲೇ ಲಾಕ್ ಆಗಿದ್ದಾರೆ. ಇದೀಗ ಸರ್ಕಾರ ಅಂತರ್ ಜಿಲ್ಲೆ ಸಂಚಾರಕ್ಕೆ ಅನುಮತಿ ನೀಡಿದೆ. ಅಂತರ್ ರಾಜ್ಯ ಸಂಚಾರಕ್ಕೂ ಅವಕಾಶ ಕಲ್ಪಿಸಿದ್ದು 2-3 ದಿನಗಳಲ್ಲಿ ಈ ಕುರಿತ ಸ್ಪಷ್ಟ ಆದೇಶ ಹೊರಬೀಳಲಿದೆ. ಈ ತಾಲೂಕಿನ ಅಂದಾಜು 10000 ಕೂಲಿ ಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ ಬರುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಹಾರ ಸಾಮಗ್ರಿ, ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
Related Articles
ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ 200 ಜನರಿಗೆ ಉದ್ಯೋಗ ಕೊಡಬೇಕು. ಕುಡಿವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ಅಗತ್ಯಬಿದ್ದರೆ 14ನೇ ಹಣಕಾಸು ಅಡಿ ಖರ್ಚು ಮಾಡಬೇಕು ಎಂದರು.
Advertisement
ಪಿಡಿಒಗಳಾದ ಪಿ.ಎಸ್.ಕಸನಕ್ಕಿ, ನಿಂಗಣ್ಣ ದೊಡಮನಿ, ವೀರೇಶ ಹೂಗಾರ, ಆನಂದ ಹಿರೇಮಠ, ಶೋಭಾ ಮುದಗಲ್, ಬಸವರಾಜ ಕಾಳಗಿ, ಖೂಬಾಸಿಂಗ್ ಜಾಧವ, ಗ್ರಾಮಲೆಕ್ಕಿಗ ಸಿ.ಎಸ್.ಮಠಪತಿ, ಸರ್ಕಲ್ ವೆಂಕಟೇಶ ಅಂಬಿಗೇರ ಮತ್ತಿತರರು ಕೊರೊನಾ ಹಾವಳಿ ತಡೆಗಟ್ಟುವ ಕ್ರಮಗಳು, ಕ್ವಾರೆಂಟೈನ್ ಮಾಡುವ ಪದ್ಧತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಪಿಐ ಆನಂದ ವಾಗಮೋಡೆ, ತಾಪಂ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಸಮಾಜ ಕಲ್ಯಾಣಾ ಧಿಕಾರಿ ಎನ್.ಆರ್. ಉಂಡಿಗೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ ಇದ್ದರು.
ಪಿಡಿಒಗಳು ಪಟ್ಟಿ ಮಾಡುವ ಗ್ರಾಮೀಣ ಭಾಗದ ಅಂದಾಜು 800 ನಿರ್ಗತಿಕರಿಗೆ ಲಾಕಡೌನ್ ಮುಗಿಯುವವರೆಗೂ ಆಹಾರಧಾನ್ಯದ ಕಿಟ್ ವಿತರಿಸಲು ತೀರ್ಮಾನಿಸಿದ್ದು ಈ ಜವಾಬ್ದಾರಿಯನ್ನು ಪಿಡಿಒಗಳು ನಿಭಾಯಿಸಬೇಕು.ಎ.ಎಸ್.ಪಾಟೀಲ ನಡಹಳ್ಳಿ,
ಶಾಸಕರು