Advertisement

ಮುದ್ದೇಬಿಹಾಳ: ಖೈದಿ ಸುಳಿವು ನೀಡಿದರೆ ಲಕ್ಷ ರೂ. ಬಹುಮಾನ !

11:42 AM Jan 27, 2023 | Kavyashree |

ಮುದ್ದೇಬಿಹಾಳ: ಜೀವಾವಧಿ ಶಿಕ್ಷೆಗೊಳಗಾಗಿದ್ದ ತಾಲೂಕಿನ ಮುದ್ನಾಳದ ರಮೇಶ ಯಮನಪ್ಪ ಪರಪ್ಪಗೋಳ ಎಂಬವನು ಪರೋಲ್ ಮೇಲೆ ಹೊರ ಬಂದು ಮರಳಿ ಕೇಂದ್ರ ಕಾರಾಗೃಹಕ್ಕೆ ಹೋಗಿ ಶರಣಾಗದೆ ತಲೆಮರೆಸಿಕೊಂಡಿದ್ದು, ಇವನ ಸುಳಿವು ನೀಡಿದವರಿಗೆ ಜಿಲ್ಲಾ ಎಸ್ಪಿ ಅವರು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Advertisement

ಎಸ್.ಸಿ.ನಂಬರ್ 81/2008ರ ಪ್ರಕರಣವೊಂದರಲ್ಲಿ ವಿಜಯಪುರದ ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.

ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿ ಅಪರಾಧಿಯಾಗಿದ್ದ. 2017ರ ಆಗಸ್ಟ್‌ 16 ರಂದು ಪರೋಲ್ ರಜೆಯ ಮೇಲೆ ತನ್ನ ಸ್ವಂತ ಊರು ಮುದ್ನಾಳ ಗ್ರಾಮಕ್ಕೆ ಬಂದಿದ್ದು, ಸೆಪ್ಟೆಂಬರ್‌ 16 ರಂದು ಪರೋಲ್ ರಜೆ ಅವಧಿ ಮುಗಿದು ಕೇಂದ್ರ ಕಾರಾಗೃಹಕ್ಕೆ ಹಾಜರಾಗಿ ಶರಣಾಗಬೇಕಿತ್ತು. ಆದರೆ ಆತ ಹಾಗೆ ಮಾಡದೆ ಅಂದಿನಿಂದಲೇ ತಲೆಮರೆಸಿಕೊಂಡಿದ್ದಾನೆ.

ಭಾವಚಿತ್ರದಲ್ಲಿರುವ ಅಪರಾಧಿಯ ಸುಳಿವು ನೀಡಿದರೆ ಅವರಿಗೆ ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಈತನ ಸುಳಿವು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು, ಇಲ್ಲವೇ ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕಿಸಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮಾಹಿತಿ ನೀಡಲು ಜಿಲ್ಲಾ ಎಸ್ಪಿ ಮೋ: 9480804201, ಪೊಲೀಸ್ ಕಂಟ್ರೋಲ್ ರೂಂ: ದೂ: 0852- 250948, ಬಸವನ ಬಾಗೇವಾಡಿ ಉಪ ವಿಭಾಗ ಡಿವೈಎಸ್ಪಿ ಮೋ: 9480804221, ಮುದ್ದೇಬಿಹಾಳ ಸಿಪಿಐ ಮೋ:9480804221, ದೂರವಾಣಿ: 08356-220332 ಸಂಪರ್ಕಿಸಲು ತಿಳಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next