ಮುದ್ದೇಬಿಹಾಳ : ತನ್ನ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಕುಂಟೆ ಹೊಡೆಸಿ ಹೊಲವನ್ನು ಹದಗೊಳಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಅಳವಡಿಸಿದ್ದ ಕಬ್ಬಿಣದ ಕುಂಟೆ ಬಡಿದು ರೈತ ಮಲ್ಲಣ್ಣ ಎರೆಡ್ಡಿ (48) ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಇಂಗಳಗೇರಿ ಗ್ರಾಮದಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಕಸ ತೆಗೆಯುವ ವೇಳೆ ಮಲ್ಲಣ್ಣ ಹೊಲದ ಒಡ್ಡಿನ ಬಳಿ ನಿಂತಿದ್ದ. ಚಾಲಕ ಟ್ರ್ಯಾಕ್ಟರನ್ನು ತಿರುಗಿಸಿದಾಗ ಹಿಂದೆ ಇದ್ದ ಕಬ್ಬಿಣದ ಕುಂಟೆ ನೇಗಿಲು ಬಡಿದು ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮೃತ ರೈತ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಳಿಕೋಟೆ ಪೊಲೀಸ್ ಠಾಣೆ ಪಿಎಸೈ ವಿನೋದ ದೊಡಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.
ಇದನ್ನೂ ಓದಿ : ಆಯುಕ್ತರ ವಿರುದ್ದ ಕರ್ನಾಟಕ ಕೊಳಚೆ ಕಾಯ್ದೆ ಉಲ್ಲಂಘನೆ ಆರೋಪ