Advertisement

ಬೆಂಗಳೂರು ಪ್ರಯಾಣ ರದ್ದು : ಮಾತಿನ ಚಕಮಕಿ

05:41 PM Jul 01, 2020 | Naveen |

ಮುದ್ದೇಬಿಹಾಳ: ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿ, ಬಲವಂತ ಹೆಚ್ಚಾದಾಗ ಘಟಕ ವ್ಯವಸ್ಥಾಪಕನ ಸೂಚನೆ ಮೇರೆಗೆ ಸಾರಿಗೆ ಸಂಸ್ಥೆಯ ಬಸ್ಸನ್ನೇ ಇಲ್ಲಿನ ಪೊಲೀಸ್‌ ಠಾಣೆಗೆ ತಂದು ನಿಲ್ಲಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿ ನಡೆದಿದೆ.

Advertisement

ಬಸವನ ಬಾಗೇವಾಡಿ- ಬೆಂಗಳೂರು ಬಸ್‌ ಇಲ್ಲಿನ ಬಸ್‌ ನಿಲ್ದಾಣಕ್ಕೆ ಸಂಜೆ 6ಕ್ಕೆ ಬಂದಿತ್ತು. ನಾಲತವಾಡದ ಒಬ್ಬ ಮಹಿಳೆ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ 5-6 ಪ್ರಯಾಣಿಕರು ಬೆಂಗಳೂರಿಗೆ ಹೊರಡಲು ಏರಿದ್ದರು. ಕಡಿಮೆ ಪ್ರಯಾಣಿಕರಿರುವುದನ್ನು ಅರಿತ ಚಾಲಕ, ನಿರ್ವಾಹಕರು ಬೆಂಗಳೂರಿಗೆ ಬಸ್‌ ಬಿಡಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದೆ.

ವಿಷಯ ತಿಳಿದ ಬಸವನಬಾಗೇವಾಡಿ ಘಟಕ ವ್ಯವಸ್ಥಾಪಕರು ಆದಾಯ ಬರುವುದಿಲ್ಲವಾದ್ದರಿಂದ ಬಸ್‌ ಓಡಿಸುವುದಿಲ್ಲ ಎಂದು ಹೇಳಿದ್ದಾರೆ. ಒತ್ತಡ ಹೆಚ್ಚಾದಾಗ ಬಸ್‌ನ್ನು ಪೊಲೀಸ್‌ ಠಾಣೆಗೆ ಒಯ್ದು ನಿಲ್ಲಿಸುವಂತೆ ಘಟಕ ವ್ಯವಸ್ಥಾಪಕರು ಚಾಲಕನಿಗೆ ಸೂಚಿಸಿದ್ದಾರೆ. ಅವರು ಹೇಳಿದಂತೆ ಚಾಲಕ ನಡೆದುಕೊಂಡಿದ್ದಾನೆ.

ಪ್ರಯಾಣಿಕರು ಪೊಲೀಸರಿಗೆ ತಿಳಿಸಿದರೂ, ಶಾಸಕರ ಬಳಿ ಹೋಗಿ ಅಳಲು ತೋಡಿಕೊಂಡರೂ ಪ್ರಯೋಜನ ಆಗಲಿಲ್ಲ. ಕೊನೆಗೆ ನಾಲತವಾಡದ ಮಹಿಳೆ ನಮ್ಮೂರಿಗೆ ಮರಳಿ ಹೋಗಲು ಬಸ್‌ ಇಲ್ಲ. ಈಗ ನಾನೇನು ಮಾಡಬೇಕು ಎಂದು ರಂಪಾಟ ಮಾಡಿದರೂ ಪ್ರಯೋಜನ ಕಂಡುಬರಲಿಲ್ಲ. ಬಸ್‌ ಚಾಲಕ, ನಿರ್ವಾಹಕರು ಮರಳಿ ಬಸ್‌ನ್ನು ತಮ್ಮ ಘಟಕದತ್ತ ಚಲಾಯಿಸಿಕೊಂಡು ಹೋಗುವ ಮೂಲಕ ಇಡಿ ಘಟನೆ ಗೊಂದಲದಲ್ಲೇ ಮುಗಿಯಿತು. ಪ್ರಯಾಣಿಕರು ಯಥೇತ್ಛವಾಗಿ ಶಾಪ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next