ಮುದ್ದೇಬಿಹಾಳ: ಪ್ರವಾಹಕ್ಕೆ ಸಿಲುಕಿದ್ದ ತಾಲೂಕಿನ ನಾಗಬೇನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದ ಸುಮಾರು 12 ಕುಟುಂಬಗಳನ್ನು ರಕ್ಷಿಸಲಾಗಿದೆ.
ಕುಟುಂಬಗಳು ಸಿಲುಕಿದರ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ಇರಲಿಲ್ಲ. ಪ್ರವಾಹ ಆವರಿಸಿ ಸುಮಾರು ದಿನಗಳು ಕಳೆದರೂ ಪ್ರವಾಹ ಪೀಡಿತ ಕುಟುಂಬಗಳು ಗುರುವಾರ ಬೆಳಗಿನವರಿಗೂ ಸಂಕಷ್ಟದಲ್ಲಿ ಕಾಲ ದೂಡಿವೆ. ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಪ್ರವಾಹಪೀಡಿತರನ್ನು ಮುದ್ದೇಬಿಹಾಳ ಪಟ್ಟಣದ ಸರಕಾರಿ ಪದವಿ ಕಾಲೇಜಿನ ಕಾಳಜಿ ಕೇಂದ್ರಕ್ಕೆ ಕರೆತಂದು ಮಾನವೀಯತೆ ಮೆರೆದಿದ್ದಾರೆ.
40 ವರ್ಷಗಳಿಂದ ಗ್ರಾಮದಲ್ಲಿ ವಾಸ: ತಾಲೂಕಿನ ಸಿದ್ದಾಪುರ ಗ್ರಾಮದ ಪ್ರವಾಹಕ್ಕೆ ಒಳಗಾದವರು ಸುಮಾರು 40 ವರ್ಷಗಳಿಂದ ಗ್ರಾಮದಲ್ಲಿನ ಕೆಬಿಜೆಎನ್‌ಎಲ್ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಶೆಡ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೇ ತಾಲೂಕಿನ ವೀರೇಶ ನಗರದಲ್ಲಿ ಮತದಾನದ ಹಕ್ಕನ್ನು, ಆಧಾರ್ ಕಾರ್ಡ್ ಪಡಿತರ ಚೀಟಿ ದಾಖಲೆಗಳೂ ಇವೆ. ಆದರೆ ಕುಟುಂಬದ ಯಾವಬ್ಬರಿಗೂ ಸರಕಾರದಿಂದ ನಿವೇಶನ ಸಿಕ್ಕಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಲಾಗುತ್ತಿದೆ.
ಸಿದ್ದಾಪುರ ಗ್ರಾಮದ ಕೆಲ ಕುಟುಂಬಗಳೂ ಪ್ರವಾಹಕ್ಕೆ ಒಳಗಾಗಿವೆ ಎಂದು ಶಾಂತಗೌಡ ಅಭಿಮಾನಿಗಳ ಬಳಗದ ಖಚಿತ ಮಾಹಿತಿ ಮೆರೆಗೆ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ತಮ್ಮ ತಂಡದೊಂದಿಗೆ ಪ್ರವಾಹಪೀಡಿತ ಕೆಬಿಜೆಎನ್‌ಎಲ್ಗೆ ಸಂಬಂಧಿಸಿದ ಪ್ರದೇಶದಲ್ಲಿ ವಾಸವಾಗಿದ್ದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದರು. ನಂತರ ಅವರನ್ನು ಮುದ್ದೇಬಿಹಾಳ ಪಟ್ಟಣದ ಸರಕಾರಿ ಪದವಿ ಕಾಲೇಜಿನ ಪ್ರವಾಹ ಪೀಡಿತರ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ನಿರಾಶ್ರಿತರಿಗೆ ಅನುವು ಮಾಡಿದ್ದಾರೆ.
ಗೊಂದಲದ ಸಮಸ್ಯೆ: ಪ್ರವಾಹಕ್ಕೆ ಒಳಗಾದ ನಿರಾಶ್ರಿತರು ತಮ್ಮ ಮತದಾನದ ಹಕ್ಕುಗಳು ಮುದ್ದೇಬಿಹಾಳ ಕ್ಷೇತ್ರದಲ್ಲಿವೆ ಎಂದು ಹೇಳುತ್ತಿದ್ದಾಗ ಕೆಲವರು ಸಿದ್ದಾಪುರ ಯಾದಗಿರಿ ಜಿಲ್ಲೆಯ ನಾರಾಯಣಪೂರ ಗ್ರಾಮಕ್ಕೆ ಸಂಬಂಧಿಸಿವೆ ಎಂದು ಹೇಳಿದರು. ನಂತರ ನಿರಾಶ್ರಿತರ ಮತದಾರರ ಗುರುತಿನ ಚೀಟಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಮುದ್ದೇಬಿಹಾಳ ತಾಲೂಕಿನ ಗಡಿಭಾಗವಾಗಿರುವ ಕೋರಿಸಂಗಪ್ಪಯ್ಯಗುಡಿಯ ಹತ್ತಿರ ಈ ಕುಟುಂಬಗಳು ವಾಸವಾಗಿದ್ದವು.