Advertisement

Muddebihal; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು,ಬಾಲಕಿಗೆ ಗಾಯ

07:48 PM Nov 16, 2023 | Team Udayavani |

ಮುದ್ದೇಬಿಹಾಳ: ಪಟ್ಟಣದ ಹೊರವಲಯದಲ್ಲಿನ ವಿಜಯಪುರ ಮುಖ್ಯ ರಸ್ತೆಯ ಬಿದರಕುಂದಿ ಹಳ್ಳದ ಕ್ರಾಸ್ ನಲ್ಲಿ ಸರಕಾರಿ ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದು, 7 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಮೃತ ದುರ್ದೈವಿ ಹರಿಂದ್ರಾಳ ಗ್ರಾಮದ ಸಂಗಮೇಶ (ಸಂಗಪ್ಪ) ಚಂದಪ್ಪ ತುರಡಗಿ (28) ಎಂದು ಗುರುತಿಸಲಾಗಿದೆ. ಸಂಗಪ್ಪ ಢವಳಗಿ ಹತ್ತಿರ ಇರುವ ವಿದ್ಯಾಸ್ಪೂರ್ತಿ ಶಾಲೆಗೆ ಮಕ್ಕಳನ್ನು ಬಿಟ್ಟು ಬಸರಕೋಡ ಕ್ರಾಸ್ ಕಡೆಯಿಂದ ಮುದ್ದೇಬಿಹಾಳಕ್ಕೆ ತನ್ನ ಅಣ್ಣನ ಮಗಳೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ. ಬಿದರಕುಂದಿ ಕ್ರಾಸ್ ದಾಟಿದ ನಂತರ ಹಳ್ಳದ ಹತ್ತಿರ ಬರುವ ಅಪಾಯಕಾರಿ ತಿರುವಿನಲ್ಲಿ ಮುದ್ದೇಬಿಹಾಳ ಕಡೆಯಿಂದ ವಿಜಯಪುರ ಕಡೆಗೆ ಹೊರಟಿದ್ದ ಬಸ್ ಏಕಾಏಕಿ ಎದುರಿಗೆ ಬಂದಾಗ ಗಾಬರಿಗೊಂಡು ಅವಘಡ ನಡೆದಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಬಲಗಾಲು ಸಂಪೂರ್ಣ ನುಜ್ಜುಗುಜ್ಜಾಗಿ ಸ್ಥಳದಲ್ಲೇ ತೀವ್ರ ರಕ್ತಸ್ರಾವ ಸಂಭವಿಸಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಇಲ್ಲಿನ ತಾಲೂಕು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 7 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ಕುರಿತು ಬಸ್ ಚಾಲಕನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಸಂಜಯ್ ತಿಪರಡ್ಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಘಟಕ ವ್ಯವಸ್ಥಾಪಕ ಭೇಟಿ
ಘಟನಾ ಸ್ಥಳಕ್ಕೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ ಅವರು ತಾಂತ್ರಿಕ ಮತ್ತು ಸಾರಿಗೆ ಸಿಬಂದಿಯೊಂದಿಗೆ ಭೇಟಿ ನೀಡಿ ಘಟನೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿದರಕುಂದಿ ಕ್ರಾಸ್ ದಾಟಿದ ನಂತರ ಬರುವ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ಈ ತಿರುವಿನಲ್ಲಿ ಅಪಾರ ಪ್ರಮಾಣದ ಜಂಗಲ್ ಬೆಳೆದಿರುವುದರಿಂದ ಎದುರಿಗೆ ಬರುವ ವಾಹನ ಕಾಣುವುದಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ. ಘಟನೆಗೆ ವಿಷಾಧ ವ್ಯಕ್ತಪಡಿಸಿ ಪಿಡಬ್ಲೂಡಿಯವರು ಜಂಗಲ್ ಕಟಿಂಗ್ ಮಾಡುವ ಮೂಲಕ ಎದುರಿಗೆ ಬರುವ ವಾಹನ ಕಾಣುವಂತೆ ಮಾಡಿ ಮುಂದೆ ಸಂಭವಿಸಬಹುದಾದ ಅಪಾಯ, ಅಪಘಾತ ತಡೆಗಟ್ಟಲು ಮುಂದಾಗುವುದು ಒಳಿತು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next