Advertisement

Muddebihal; 45 ಗೋವುಗಳ ರಕ್ಷಣೆ; ಲಾರಿ ವಶ; ಎಫ್ಐಆರ್ ದಾಖಲು

02:20 PM Jun 17, 2023 | Shreeram Nayak |

ಮುದ್ದೇಬಿಹಾಳ: ಕುಷ್ಠಗಿ ಭಾಗದಿಂದ ಕಲಬುರ್ಗಿಯತ್ತ ಲಾರಿಗಳಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸಂಶಯದ ಮೇಲೆ 45 ಗೋವು(ಆಕಳು) ಲಾರಿ ಸಮೇತ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಲಾರಿ ಚಾಲಕರು, ಲಾರಿಯಲ್ಲಿದ್ದ ಗೋವು ಸಾಗಾಣಿಕೆದಾರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Advertisement

ಕೃಷ್ಣಾ ನದಿಯ ಸೇತುವೆ ದಾಟಿ ತಂಗಡಗಿ ಗ್ರಾಮದ ಮೂಲಕ ಇವುಗಳನ್ನು ಸಾಗಿಸುತ್ತಿರುವ ಮಾಹಿತಿ ಅರಿತ ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ವಾಹನ ತಡೆದು ವಿಚಾರಣೆ ನಡೆಸಿದಾಗ ಇವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಮಾಹಿತಿ ಗೊತ್ತಾಗಿ ಕಾರ್ಯಕರ್ತರ ಆಗ್ರಹದ ಮೇರೆಗೆ ಈ ಪ್ರಕರಣ ದಾಖಲಾಗಿದೆ.

ಗದ್ದಲ ವಾಗ್ವಾದ:
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದನ್ನು ತಿಳಿದ ಒಂದು ಕೋಮಿನ ಹಲವು ಯುವಕರು ಗುಂಪಾಗಿ ಪೊಲೀಸ್ ಠಾಣೆಗೆ ಬಂದು ತಕರಾರು ತೆಗೆದರು. ಪಿಎಸೈ ಅವರು ಎಲ್ಲರಿಗೂ ಬುದ್ದಿವಾದ ಹೇಳಿ, ಕಾನೂನಿನ ತಿಳಿವಳಿಕೆ ನೀಡಿದ ಮೇಲೆ ಅವರೆಲ್ಲ ಗೊಣಗುತ್ತಲೇ ಠಾಣೆಯಿಂದ ನಿರ್ಗಮಿಸಿದರು.

ಮಾನವೀಯತೆ:
ಗೋವುಗಳನ್ನು ತಂಗಡಗಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಳಿಸಿ ಹಿಂದು ಪರ ಸಂಘಟನೆಗಳ ಮುಖಂಡರು, ಪೊಲೀಸರು ಅವುಗಳಿಗೆ ಮೇವು, ನೀರು ಕೊಟ್ಟು ಮಾನವೀಯತೆ ತೋರಿದರು. ಸಧ್ಯ ಎಲ್ಲ ಗೋವುಗಳನ್ನು ಯಲಗೂರದಲ್ಲಿರುವ ಗೋಶಾಲೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next