Advertisement

ಮಹಿಳೆ ಮನುಕುಲದ ಜೀವಕಳೆ

12:13 PM Mar 12, 2020 | Naveen |

ಮುದ್ದೇಬಿಹಾಳ: ಮಹಿಳೆ ಮನುಕುಲದ ಜೀವಕಳೆ ಆಗಿದ್ದಾಳೆ. ಅವಳನ್ನು ಎಲ್ಲ ಸಂಕೋಲೆಗಳಿಂದ ಮು ಕ್ತಗೊಳಿಸಿ ಸ್ವಾತಂತ್ರ್ಯ ನೀಡಿದಾಗ ಮಾತ್ರ ಬಸವಣ್ಣನ ಆದಿಯಾಗಿ 12ನೇ ಶತಮಾನದ ಶರಣರು ಕಂಡಿದ್ದ ಪೂರ್ಣಪ್ರಮಾಣದ ಸಮಾಜ ಅಸ್ತಿತ್ವಕ್ಕೆ ಬರುವುದು ಸಾಧ್ಯವಿದೆ ಎಂದು ಜಾತಿ ತೊಲಗಿಸಿ-ಜ್ಯೋತಿ ಬೆಳಗಿಸಿ ಪ್ರವಚನ ಯಾತ್ರೆಯ ರೂವಾರಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿಯವರು ಹೇಳಿದ್ದಾರೆ.

Advertisement

ಮುದ್ದೇಬಿಹಾಳ ತಾಲೂಕಿನ ಇಣಚಗಲ್‌ ಗ್ರಾಮದಲ್ಲಿ 5 ದಿನಗಳವರೆಗೆ ನಡೆದ ಜಾತಿ ತೊಲಗಿಸಿ ಜ್ಯೋತಿ ಬೆಳಗಿಸಿ ಪ್ರವಚನ ಯಾತ್ರೆ ಸಮಾರೋಪದಂದು ಏರ್ಪಡಿಸಿದ್ದ ಮುತ್ತದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಬಹುಕಾಲದಿಂದ ಶೋಷಣೆಗೊಳ ಪಟ್ಟಿರುವ ಮಹಿಳೆಯನ್ನು ಕೆಲ ಸಂಪ್ರದಾಯವಾದಿಗಳು ಬಂಧಿಸಿಟ್ಟಿದ್ದಾರೆ. ಸಮಾಜದಲ್ಲಿ ಆಕೆಯ ಸ್ಥಾನಮಾನ ನೆಪ ಮಾತ್ರಕ್ಕೆ ಎನ್ನುವಂತಿದೆ. ಯತ್ರನಾರಿತ್ರ ಪೂಜ್ಯಂತೆ ತತ್ರ ದೇವೋಭವ ಎನ್ನುವ ಮಾತು ನಿಜವಾಗಬೇಕಾದರೆ ಮಹಿಳೆಯನ್ನು ಗೌರವಿಸುವ ವಾತಾವರಣ ನಿರ್ಮಾಣಗೊಳ್ಳಬೇಕು. ಇದು ಗ್ರಾಮೀಣ ಭಾಗದಿಂದಲೇ ಪ್ರಜ್ವಲಿಸಬೇಕು ಎಂದರು.

5 ದಿನಗಳವರೆಗೆ ಪ್ರವಚನ ನೀಡಿದ ಪ್ರವಚನ ಭೂಷಣ ಯರಗಲ್ಲದ ಷಡಕ್ಷರಿ ಶಾಸ್ತ್ರಿಯವರು ಮಾತನಾಡಿ, ಮನುಷ್ಯ ವಿಶ್ವಧರ್ಮ ಪಾಲಕ. ಬಸವಾದಿ ಶರಣರು ಜಾತಿ ವಿರುದ್ಧ ಹೋರಾಡಿದರು.

ಜಾತೀಯತೆಯಿಂದಲೇ ಮನುಷ್ಯ ಸಂಬಂಧಗಳು ಹಾಳಾಗತೊಡಗಿವೆ. ನಾವೆಲ್ಲರೂ ಸೇರಿ ಜಾತಿ ತೊಲಗಿಸಿ ಜ್ಯೋತಿ ಬೆಳಗಿಸುವ ಸಾರ್ಥಕ ಕಾರ್ಯ ಮಾಡಬೇಕು ಎಂದರು.

Advertisement

5 ದಿನಗಳ ಪ್ರವಚನದಲ್ಲಿ ಸ್ತ್ರೀ ಸಮಾನತೆ, ಭಾರತದ ಧರ್ಮಗಳು, ಸಂಸಾರ, ಹಣ, ನಿಂದೆ, ಜಾತಿ, ಕಲ್ಯಾಣ ದರ್ಶನ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಗ್ರಾಮದ ಮಾರುತೇಶ್ವರ ಭಜನಾ ಮಂಡಳಿಯವರು ಸ್ವಾಮೀಜಿಗಳು ಸೇರಿದಂತೆ ಸರ್ವ ಗಣ್ಯರನ್ನೂ ಸನ್ಮಾನಿಸಿದರು. ಪಂಚಾಯತ್‌ ಅಭಿವೃದ್ಧಿ ಅ ಧಿಕಾರಿ ಆನಂದ ಮಠ ದಂಪತಿ ಮುತ್ತೈದೆಯರಿಗೆ ಉಡಿ ತುಂಬುವ ಹೊಣೆ ನಿಭಾಯಿಸಿದರು.

ಪ್ರಮುಖರಾದ ಸಾಯಬಣ್ಣ ತಳವಾರ, ನಾಗರಾಜ ಕನ್ನೊಳ್ಳಿ,
ಮಲ್ಲನಗೌಡ ಪಾಟೀಲ, ಬಸವರಾಜ ತಾಳಿಕೋಟೆ, ವೀರೇಶ ಕೈನೂರ, ವಿ.ಕೆ. ದೇಶಪಾಂಡೆ, ನಿಂಗನಗೌಡ ಪಾಟೀಲ, ಮಲ್ಲಪ್ಪ ಝೈನೂರ, ಹನುಮಂತ ಕನ್ನೊಳ್ಳಿ, ಹನುಮಂತ ಭೆ„ರವಾಡಗಿ, ಸಯ್ಯ ಹಿರೇಮಠ, ನಿಂಗಪ್ಪ ಮೇಟಿ, ಸಾಹೇಬಗೌಡ ತಾಳಿಕೋಟಿ, ಶಬ್ಬೀರ್‌ ಇನಾಮದಾರ ಸೇರಿದಂತೆ ಹಲವು ಗಣ್ಯರು ವಿವಿಧ ಧಾರ್ಮಿಕ, ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next