Advertisement

44 ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 2390 ಜನ

04:28 PM May 22, 2020 | Naveen |

ಮುದ್ದೇಬಿಹಾಳ: ತಾಲೂಕಿನ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ ಭಾಗದ ಒಟ್ಟು 44 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಮಕ್ಕಳು, ಮಹಿಳೆಯರು ಸೇರಿ ಒಟ್ಟು 2390 ಜನರನ್ನು ಸುರಕ್ಷಿತವಾಗಿ ಇಡಲಾಗಿದೆ.

Advertisement

ಇವರೆಲ್ಲರ ಸ್ವ್ಯಾಬ್‌ (ಗಂಟಲುದ್ರವ) ತೆಗೆದು ಪ್ರಯೋಗಾಲಯಕ್ಕೆ ಕಳಿಸುವ ಕಾರ್ಯ ನಿರಂತರ ನಡೆದಿದೆ. ಕಳೆದ 4-5 ದಿನಗಳಿಂದ ಮಹಾರಾಷ್ಟ್ರ ಸೇರಿದಂತೆ ಹೈರಿಸ್ಕ್ ರಾಜ್ಯಗಳಿಂದ ಆಗಮಿಸಿರುವ ಎರಡೂ ತಾಲೂಕಿನ ವಲಸೆ ಕಾರ್ಮಿಕರನ್ನು ಇಡಲಾಗಿರುವ ಕೇಂದ್ರಗಳಿಗೆ ತೆರಳುತ್ತಿರುವ ಪ್ರಯೋಗಾಲಯ ತಜ್ಞರು, ಸಹಾಯಕರ ತಂಡ ಇದುವರೆಗೆ ಅಂದಾಜು 700 ಜನರ ಗಂಟಲುದ್ರವವನ್ನು ವಿಜಯಪುರ ಜಿಲ್ಲಾ ಸಮೀಕ್ಷಾ ಘಟಕಕ್ಕೆ ಕಳಿಸಿ ಅಲ್ಲಿಂದ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ.

ಪ್ರತಿ ಹೋಬಳಿಗೆ ಒಂದರಂತೆ ಎರಡೂ ತಾಲೂಕುಗಳ 4 ಹೋಬಳಿವ್ಯಾಪ್ತಿಯಲ್ಲಿ 4 ತಂಡಗಳು ಗಂಟಲುದ್ರವ ತೆಗೆಯುವ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿವೆ. ಪ್ರತಿ ತಂಡದಲ್ಲಿ 3 ತಜ್ಞರಿರುವುದರಿಂದ ಮತ್ತು ಸಂಪೂರ್ಣ ಸುರಕ್ಷತೆಯೊಂದಿಗೆ ಗಂಟಲುದ್ರವ ತೆಗೆಯಬೇಕಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಈ ಕಾರ್ಯ ನಡೆಯುತ್ತಿದೆ. ಗಂಟಲುದ್ರವ ತೆಗೆಯುವಾಗ ನೇರವಾಗಿ ವ್ಯಕ್ತಿಯ ಸಂಪರ್ಕದಲ್ಲಿ ಬರುವ ಪ್ರಯೋಗಾಲಯ ತಂತ್ರಜ್ಞರಿಗೆ ಪಿಪಿಇ ಕಿಟ್‌ ಒದಗಿಸಲಾಗಿದೆ.

ತಾಲೂಕು ಆರೋಗ್ಯಾಕಾರಿ ಡಾ| ಸತೀಶ ತಿವಾರಿ ನೇತೃತ್ವದಲ್ಲಿ ಹಿರಿಯ ಪ್ರಯೋಗಾಲಯ ತಂತ್ರಜ್ಞ ಈರಣ್ಣ ಚಿನಿವಾರ, ಮಹ್ಮದರಫೀಕ ಮುದ್ನಾಳ, ಇಸ್ಮಾಯಿಲ್‌ ಮೇಟಿ, ಸರ್ಫರಾಜನವಾಜ್‌ ನಾಯ್ಕೋಡಿ, ಶಕೀಲಹ್ಮದ್‌ ನಾಯ್ಕೋಡಿ, ವಿಜಯಮಹಾಂತೇಶ ಪವಾಡಶೆಟ್ಟಿ, ಅಬ್ದುಲ್‌ಹಮೀದ್‌ ಪಟೇಲ, ಬಸವರಾಜ ಇಜೇರಿ, ಸಚಿನ್‌ ರೂಢಗಿ, ರಾಜು ಬೋರಗಿ, ಆನಂದಗೌಡ ಬಿರಾದಾರ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next