Advertisement

ಮುದ್ದಣ ಸಾಹಿತ್ಯೋತ್ಸವ: ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ

03:45 AM Feb 20, 2017 | Team Udayavani |

ಮೂಡಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಮುದ್ದಣ ಸಾಹಿತ್ಯೋತ್ಸವ-2017, ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಭಾರತೀಯ ವಿಕಾಸ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ಉಡುಪ ಅವರ ಅಧ್ಯಕ್ಷತೆಯಲ್ಲಿ ಕಾಂತಾವರದ ಕನ್ನಡ ಭವನದಲ್ಲಿ ರವಿವಾರ ನಡೆಯಿತು.

Advertisement

ತಮ್ಮ “ಕಣ್ಣ ಪಾಪೆಯ ಬೆಳಕು’ ಹಸ್ತ ಪ್ರತಿಗೆ 2016ನೇ ಸಾಲಿನ, 42ನೇಮುದ್ದಣ ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರಿನ ಕವಿ ಟಿ. ಎಲ್ಲಪ್ಪ ಅವರಿಗೆ ಪ್ರಶಸ್ತಿ ಪ್ರಾಯೋಜಕ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹತ್ತು ಸಾವಿರ ರೂ. ಗೌರವ ನಗದು, ಶಾಲು, ಹಾರ, ತಾಮ್ರಪತ್ರ, ಸಮ್ಮಾನ ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.ಅದಾನಿ ಯುಪಿಸಿಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ಉದ್ಘಾಟಿಸಿದರು.

ಯುಪಿಸಿಎಲ್‌ ಸ್ಥಾವರದಲ್ಲಿ ಕನ್ನಡಿಗರಿಗೆ ಶೇ. 82ರಷ್ಟು ಉದ್ಯೋಗ ಕನ್ನಡಿಗರ ಪಾಲಾಗಿದೆ. 80 ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ, ಜಿಲ್ಲೆಯಲ್ಲಿ 12,000 ಮಂದಿಗೆ ಜೀವ ವಿಮೆ, ಸಾಮಾಜಿಕ, ಸಾಹಿತ್ಯವೇ ಮೊದಲಾದ ರಂಗಗಳಿಗೆ ಕೊಡುಗೆ ನೀಡುತ್ತಿದ್ದು, ಕಾಂತಾವರ ಕನ್ನಡ ಸಂಘಕ್ಕೂ ಆರ್ಥಿಕ ಬಲ ನೀಡುವುದಾಗಿ ಕಿಶೋರ್‌ ಆಳ್ವ ತಿಳಿಸಿದರು.

ಕೆ.ಎಂ. ಉಡುಪ ಅವರು “ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ 13 ಕೃತಿ(ಸಂಪಾದಕ: ಡಾ| ಬಿ. ಜನಾರ್ದನ ಭಟ್‌)ಗಳನ್ನು ಲೋಕಾರ್ಪಣೆ ಮಾಡಿದರು. ಕನ್ನಡ ಸಂಘದ ನುಡಿನಮನ ಉಪನ್ಯಾಸ ಮಾಲೆಯ “ನುಡಿಹಾರದ ಎಂಟನೇ ಸಂಪುಟ’ (ಸಂಪಾದಕ: ಡಾ| ಎಸ್‌.ಆರ್‌. ಅರುಣ್‌ ಕುಮಾರ್‌)ವನ್ನು ಲೋಕಾರ್ಪಣೆಗೊಳಿಸಲಾಯಿತು.

ಗ್ರಂಥಮಾಲೆಯ ಸಾಧಕರು, ಗ್ರಂಥ ಮಾಲೆಯ ಕೃತಿಕಾರರು, ಪ್ರಾಯೋಜಕರು, ನುಡಿಹಾರ, ನಾಡಿಗೆ ನಮಸ್ಕಾರ ಗ್ರಂಥ ಮಾಲೆ ಸಂಪಾದಕರನ್ನು ಗೌರವಿಸಲಾಯಿತು.ಸಂಘದ ಅಧ್ಯಕ್ಷ ಡಾ| ನಾ. ಮೊಗಸಾಲೆ ಪ್ರಸ್ತಾವನೆಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ವಂದಿಸಿದರು. ಬಾಬು ಶೆಟ್ಟಿ ನಾರಾವಿ, ವಿಠಲ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿದರು. 

Advertisement

ನಾಡಿಗೆ ನಮಸ್ಕಾರಕ್ಕೆ ಮತ್ತೆ 13 ಕೃತಿಗಳು 
1. ಡಾ| ಟಿ.ಎನ್‌.ಭಟ್‌ 
(ಲೇ: ಎಸ್‌.ಆರ್‌.ಅರುಣ ಕುಮಾರ್‌), 
2.ಅಂಬಾತನಯ ಮುದ್ರಾಡಿ (ಪಾದೇಕಲ್ಲು ವಿಷ್ಣು ಭಟ್‌), 
3. ರಮಾನಂದ ಘಾಟೆ (ಡಾ| ಬಿ. ಜನಾರ್ದನ ಭಟ್‌), 
4. ಕಾಪು ಮುದ್ದಣ ಶೆಟ್ಟಿ (ಅಲ್ಬರ್ಟ್‌ ರೋಡಿಗ್ರಸ್‌), 5. ಕೋಟ ಲಕ್ಷ್ಮೀನಾರಾಯಣ ಆಚಾರ್ಯ (ಕಾರ್ಕಡ ಮಹಾಬಲೇಶ್ವರ ಆಚಾರ್ಯ), 
6. ಶ್ರೀಧರ ಹಂದೆ (ಮಂಜುನಾಥ ಉಪಾಧ್ಯ) 
7. ಗಂಗಾ ಪಾದೇಕಲ್ಲು (ದಿವ್ಯಗಂಗಾ ಕಾಸರಗೋಡು), 8. ಸಂಗೀತ ವಿದ್ವಾಂಸ ನಂದಾವರ ಕೇಶವ ಭಟ್‌ (ಬಿ.ಎಂ. ರೋಹಿಣಿ), 
9. ಯಕ್ಷಗಾನದ ಸವ್ಯಸಾಚಿ ಕವಿಭೂಷಣ ವೆಂಕಪ್ಪ ಶೆಟ್ಟಿ 
(ಲೇ: ಕೆದಂಬಾಡಿ ತಿಮ್ಮಪ್ಪ ರೈ), 
10. ನವಕರ್ನಾಟಕದ ರೂವಾರಿ ಆರ್‌.ಎಸ್‌. ರಾಜಾರಾಂ (ಸಿ.ಆರ್‌. ಕೃಷ್ಣರಾವ್‌)
12. ಗಿರಿಬಾಲೆ (ಡಾ| ವಸಂ ಕುಮಾರ್‌ ಉಡುಪಿ) ಮತ್ತು 
13. ಗಲ್ಪ್ ಕನ್ನಡಿಗ ಬಿ.ಜಿ. ಮೋಹನದಾಸ (ಅಂಶುಮಾಲಿ) 

Advertisement

Udayavani is now on Telegram. Click here to join our channel and stay updated with the latest news.

Next