Advertisement

MUDAದ 14 ಸೈಟ್‌ ವಾಪಸ್‌ಗೆ ಸಿದ್ಧ: ಸಿದ್ದರಾಮಯ್ಯ ಘೋಷಣೆ

01:17 AM Aug 09, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್‌ ಹಂಚಿ ಕೆ ಹಗರಣದಲ್ಲಿ ವಿವಾದಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಗೆ ನೀಡಲಾಗಿರುವ 14 ಸೈಟ್‌ ಅನ್ನು ವಾಪಸ್‌ ನೀಡಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.

Advertisement

ಈ ಸಂಬಂಧ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿ ರುವ ಅವರು, ನನಗೆ ಸೈಟ್‌ ಹಾಗೂ ಜಮೀ ನಿನ ಬಗ್ಗೆ ಆಸಕ್ತಿ ಇಲ್ಲ. 14 ಸೈಟ್‌ಗಳನ್ನು ವಾಪಸ್‌ ನೀಡಲು ಸಿದ್ಧನಿದ್ದೇನೆ. ಟೇಕ್‌ ಇಟ್‌ ಬ್ಯಾಕ್‌… ’ ಎಂದಿದ್ದಾರೆ. ಆದರೆ ಇದು ನನ್ನ ಪತ್ನಿಯ ಹೆಸರಿನಲ್ಲಿ ರುವ ಸೈಟ್‌ ಆಗಿದ್ದು, ಅದನ್ನು ವಾಪಸ್‌ ಮರಳಿಸಿ ದರೆ ಅವ ರಿಗೆ ಮುಡಾ ಏನು ಪರಿ ಹಾರ ಕೊಡ ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಆಂಧ್ರ ಡಿಸಿಎಂ ಪವನ್‌ ಕಲ್ಯಾ ಣ್‌ ಬೆಂಗಾವಲು ವಾಹನದಲ್ಲಿ ಹೆಬ್ಟಾವು!
ಬೆಂಗಳೂರು: ಆಂಧ್ರಪ್ರದೇಶದ ಡಿಸಿಎಂ ಕೆ. ಪವನ್‌ ಕಲ್ಯಾಣ್‌ ಬೆಂಗಾವಲು ವಾಹನದಲ್ಲಿ ಹೆಬ್ಟಾವು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಅವರು ಗುರುವಾರ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚಿಸಿದರು.

ಬಳಿಕ ವಿಧಾನಸೌಧಕ್ಕೆ ತೆರಳಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರೊಂದಿಗೆ ಸಭೆ ನಡೆಸಿದರು. ಬಳಿ ಕ ಮಲ್ಲೇಶ್ವರದಲ್ಲಿರುವ ಅರಣ್ಯ ಭವನಕ್ಕೆ ಆಗಮಿಸಿ, ನರ್ಸರಿ ಪದ್ಧತಿಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯ ಕ್ರ ಮ ದಲ್ಲಿ ಭಾಗಿ ಯಾ ಗಿ ದ್ದರು. ಈ ವೇಳೆ ಅವ ರ ಬೆಂಗಾವಲು ವಾಹನದಿಂದ ಹೆಬ್ಟಾವೊಂದು ನಿಧಾನವಾಗಿ ಇಳಿಯುತ್ತಿದ್ದುದನ್ನು ಗಮನಿಸಿದ ಸಿಬಂದಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಅದನ್ನು ಸೆರೆಹಿಡಿಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next